
ವಿಡಿಯೋದಲ್ಲಿ ಕಂಡುಬರುವಂತೆ ಮಕ್ಕಳ ತಂಡವೊಂದು ಮನೆ ಮುಂದೆ ಆಟವಾಡುತ್ತಿರುತ್ತದೆ. ಈ ವೇಳೆ ಏಕಾಏಕಿ ಬರುವ ಮಂಗ ಸನಿಹದಲ್ಲಿ ಆಟವಾಡುತ್ತಿದ್ದ ಮಗುವನ್ನು ಎಳೆದೊಯ್ಯಲು ಯತ್ನಿಸಿದೆ. ಇದನ್ನು ಕಂಡ ಇತರೆ ಮಕ್ಕಳು ಗಾಬರಿಗೊಂಡು ಅಲ್ಲಿಂದ ಓಡಿದ್ದಾರೆ.
ಇದರ ಮಧ್ಯೆ ಮಗುವಿನ ಕಿರುಚಾಟ ಕೇಳಿಸಿಕೊಂಡು ತಾಯಿ ಓಡಿ ಬಂದಿದ್ದು, ಮಗುವನ್ನು ಎತ್ತಿಕೊಂಡಿದ್ದಾಳೆ. ಇಷ್ಟಾದರೂ ಸಹ ಮಂಗ ಮಾತ್ರ ಮಗುವನ್ನು ಕಸಿದುಕೊಳ್ಳಲು ಯತ್ನಿಸುತ್ತದೆ. ಅಷ್ಟರಲ್ಲಿ ಮಗುವಿನ ತಂದೆಯು ಬಂದಿದ್ದು, ಮಂಗವನ್ನು ಹೆದರಿಸಿ ಓಡಿಸಲು ಯತ್ನಿಸಿದ್ದಾನೆ. ಆದಾಗ್ಯೂ ಸಹ ಅದು ಕೇರ್ ಮಾಡದೆ ಮತ್ತೆ ಮತ್ತೆ ಅಟ್ಯಾಕ್ ಮಾಡಲು ಪ್ರಯತ್ನಿಸಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ವೈರಲ್ ವಿಡಿಯೋ ಮಾತ್ರ ಪೋಷಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.