ಥೈಲ್ಯಾಂಡ್‌ನಲ್ಲಿ ವಿಚಿತ್ರ ಕಾಮ ಹಗರಣವೊಂದು ಬಯಲಿಗೆ ಬಂದಿದೆ. ರಾಜಕಾರಣಿಯಾಗಿರುವ ತಾಯಿ ದತ್ತುಪುತ್ರನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಆಕೆಯ ಗಂಡನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. 45 ವರ್ಷದ ರಾಜಕಾರಣಿ ಪ್ರಪಾಪಾನ್ ಚೋಯಿವಾಡ್ಕೊಹ್ ತನ್ನ 24 ವರ್ಷದ ದತ್ತುಪುತ್ರನೊಂದಿಗೆ ತನ್ನ ಪತಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದಂತೆ ರಾಜಕಾರಣಿಯ ಪತಿಗೆ ಅನುಮಾನ ಬಂದು ಪತ್ತೆಕಾರ್ಯಕ್ಕಿಳಿದಾಗ ಈ ರಹಸ್ಯ ಸಂಬಂಧ ಬಯಲಾಗಿದೆ. ಕೋಪಗೊಂಡ ಪತಿ ತನ್ನ ಹೆಂಡತಿಯ ಸಂಬಂಧವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ದತ್ತು ಪುತ್ರ ಫ್ರಾ ಮಹಾ ಓರ್ವ ಸನ್ಯಾಸಿ.
ಗಮನಾರ್ಹವಾಗಿ ಪ್ರಪಾಪಾನ್ ಮತ್ತು ಅವರ ಪತಿ, 2023 ರಲ್ಲಿ ಫ್ರಾ ಅವರನ್ನು ದೇವಸ್ಥಾನದಿಂದ ದತ್ತು ಪಡೆದಿದ್ದರು. ಹೆಂಡತಿಯ ದ್ರೋಹಕ್ಕೆ ಕೋಪಗೊಂಡ ಪತಿ, ನಾನು ಆಕೆಗೆ ಅನೇಕ ಉಡುಗೊರೆ, ಚಿನ್ನ ನೀಡಿದ್ದೆ . ಆದರೆ ಆಕೆ ನನಗೆ ಮೋಸ ಮಾಡಿದಳೆಂದು ಆರೋಪಿಸಿದ್ದಾರೆ.
ಈ ಘಟನೆಯು ಪತಿಗೆ ಕೋಪವನ್ನುಂಟುಮಾಡಿದ್ದಲ್ಲದೆ ಅವನು ತನ್ನ ಹೆಂಡತಿಯಿಂದ ದ್ರೋಹವನ್ನು ಅನುಭವಿಸಿದ್ದಾನೆ. ಪ್ರಪಾಪೋರ್ನ್ ಸುಖೋಥೈನಲ್ಲಿ ಪ್ರಸಿದ್ಧ ರಾಜಕಾರಣಿ ಮತ್ತು ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಮುಖ್ಯಸ್ಥರಾಗಿದ್ದಾರೆ.
ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ದತ್ತು ಪುತ್ರ ಫ್ರಾ ಮಹಾ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.