ಬೆಂಗಳೂರು : ಕನ್ನಡಿಗರ ಸಂಚಾರನಾಡಿಯಾಗಿರುವ ಸಾರಿಗೆ ಬಸ್ಗಳಲ್ಲಿ ಡಿಜಿಟಲ್ ಯುಗ ಆರಂಭಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಕನ್ನಡಿಗರ ಸಂಚಾರನಾಡಿಯಾಗಿರುವ ಸಾರಿಗೆ ಬಸ್ಗಳಲ್ಲಿ ಡಿಜಿಟಲ್ ಯುಗ ಆರಂಭಗೊಂಡಿದೆ. ರಾಜ್ಯದ ಸಾರಿಗೆ ಬಸ್ಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಚಿಲ್ಲರೆ ಸಮಸ್ಯೆಗೆ ರಾಜ್ಯ ಸರ್ಕಾರ ಮುಕ್ತಿ ಹಾಡಿದ್ದು, ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಸುಖಕರವಾಗಿರಿಸಲು ಕ್ಯಾಶ್ಲೆಸ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ನೀವು ಗೂಗಲ್ಪೇ, ಫೋನ್ ಪೇ ಅಥವಾ ಇತರೆ ಯಾವುದೇ ಯುಪಿಐ ಆ್ಯಪ್ ಬಳಕೆ ಮಾಡುತ್ತಿದ್ದಲ್ಲಿ ಕ್ಯಾಷ್ನ ಚಿಂತೆ ಮರೆತು ನಿಶ್ಚಿಂತರಾಗಿ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರ ಸಂಚಾರನಾಡಿಯಾಗಿರುವ ಸಾರಿಗೆ ಬಸ್ಗಳಲ್ಲಿ ಡಿಜಿಟಲ್ ಯುಗ ಆರಂಭಗೊಂಡಿದೆ.
ರಾಜ್ಯದ ಸಾರಿಗೆ ಬಸ್ಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಚಿಲ್ಲರೆ ಸಮಸ್ಯೆಗೆ ರಾಜ್ಯ ಸರ್ಕಾರ ಮುಕ್ತಿ ಹಾಡಿದ್ದು, ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಸುಖಕರವಾಗಿರಿಸಲು ಕ್ಯಾಶ್ಲೆಸ್ ವ್ಯವಸ್ಥೆಯನ್ನು… pic.twitter.com/CwdCJtgRz8
— Siddaramaiah (@siddaramaiah) February 19, 2025