alex Certify Viral Video: ಎಚ್ಚರ…..! ಹೀಗೆಲ್ಲ ನಡೆಯುತ್ತೆ ಆನ್ಲೈನ್ ವಂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಎಚ್ಚರ…..! ಹೀಗೆಲ್ಲ ನಡೆಯುತ್ತೆ ಆನ್ಲೈನ್ ವಂಚನೆ

ಆನ್ಲೈನ್‌ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಬ್ಯಾಂಕ್‌, ಕಂಪನಿ ಹೆಸರಿನಲ್ಲಿ ಕರೆ ಮಾಡಿ, ಒಟಿಪಿ ಕೇಳಿ ಹಣ ದೋಚುವ ಪ್ರಕರಣ ನಿತ್ಯ ವರದಿಯಾಗ್ತಿದೆ. ಜನರಿಗೆ ಜಾಗೃತಿ ಮೂಡಿಸ್ತಿದ್ದಂತೆ ವಂಚಕರು ಹೊಸ ದಾರಿಯನ್ನು ಕಂಡುಕೊಳ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವಂಚನೆಯ ಒಂದು ವಿಡಿಯೋ ವೈರಲ್‌ ಆಗಿದೆ. ಯುಪಿಐ ಪಿನ್‌ ಹಾಕುವಂತೆ ಕೇಳುವ ವಂಚಕನ ವಿಡಿಯೋ ಮಾಡಿರುವ ಗ್ರಾಹಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಖಾತೆ ಪರಿಶೀಲನೆಗೆ 8,999 ರೂಪಾಯಿ ಯುಪಿಐ ಮಾಡುವಂತೆ ವಂಚಕ ಹೇಳ್ತಾನೆ. ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಹಣವನ್ನು ವಾಪಸ್‌ ಮಾಡುವುದಾಗಿ ಆತ ಹೇಳ್ತಾನೆ. ವಂಚಕ ಹೇಳಿದಂತೆ ವ್ಯಕ್ತಿ, ಯುಪಿಐ ಪಿನ್‌ ನಮೂದಿಸುವ ಪೇಜ್‌ ಗೆ ಹೋಗ್ತಾನೆ. ಆದ್ರೆ ಅಲ್ಲಿ ಅದು ಸ್ಕ್ಯಾಮ್‌ ಎಂಬ ಅನುಮಾನ ಬರುತ್ತದೆ.

ಈ ಸಮಯದಲ್ಲಿ ಯುಪಿಐ ಪಿನ್‌ ಯಾಕೆ ಹಾಕ್ಬೇಕು ಎಂದು ಗ್ರಾಹಕ ಕೇಳ್ತಾನೆ. ಅಲ್ಲದೆ 15 ನಂಬರ್‌ ಏಕಿದೆ ಎಂದು ಪ್ರಶ್ನೆ ಮಾಡ್ತಾನೆ.

ಅದಕ್ಕೆ ವಂಚಕ ಹಾರಿಕೆ ಉತ್ತರ ನೀಡಲು ಶುರು ಮಾಡ್ತಾನೆ. ನಂತ್ರ ಗ್ರಾಹಕ ವಿಡಿಯೋ ರೆಕಾರ್ಡ್‌ ಆಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಮಾಡುತ್ತೇನೆ ಎಂದಾಗ ಕೋಪಗೊಳ್ಳುವ ವಂಚಕ ಬೆದರಿಕೆ ಶುರು ಮಾಡ್ತಾನೆ.

ಆಗಸ್ಟ್ 6 ರಂದು ಚಿತ್ರೀಕರಿಸಲಾದ ವೀಡಿಯೊವು ಸುಮಾರು ಐದು ಲಕ್ಷ ವೀಕ್ಷಣೆ ಪಡೆದಿದೆ. 6,400 ಕ್ಕೂ ಹೆಚ್ಚು ಲೈಕ್‌ ಬಂದಿದೆ. ಇಲ್ಲಿ ವಂಚನೆಗೊಳಗಾದ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...