alex Certify BIG NEWS: ವಾಹನ ವಿಮೆ ಸಂಬಂಧ ಕಂಪನಿಗಳಿಗೆ ʼಸುಪ್ರೀಂʼ ಮಹತ್ವದ ನಿರ್ದೇಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಹನ ವಿಮೆ ಸಂಬಂಧ ಕಂಪನಿಗಳಿಗೆ ʼಸುಪ್ರೀಂʼ ಮಹತ್ವದ ನಿರ್ದೇಶನ

ರಸ್ತೆ ಅಪಘಾತವಾದಾಗ ಅಪಘಾತ ವಿಮೆ ಕ್ಲೈಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಗೆ ಸುಪ್ರೀಂ ಕೋರ್ಟ್ ಎರಡು ತಿಂಗಳ ಗಡುವನ್ನು ನಿಗದಿಪಡಿಸಿದೆ. ಅಪಘಾತ ನಡೆದ 48 ಗಂಟೆಗಳ ಒಳಗೆ ಪೊಲೀಸರು ಅಪಘಾತದ ಮಾಹಿತಿಯನ್ನು ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಪೊಲೀಸರು 90 ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸಬೇಕು. ಅದರ ನಂತರ, ವಿಮಾ ಕಂಪನಿಗಳು, ಹಕ್ಕುದಾರರಿಗೆ ನಿರ್ದಿಷ್ಟ ಮೊತ್ತದ ಹಣವನ್ನು ಪಾವತಿಸಲು 30 ದಿನಗಳ ಅವಧಿಯಿರುತ್ತದೆ. ಒಂದು ವೇಳೆ 30 ದಿನಗಳಲ್ಲಿ ಪರಿಹಾರ ಸಿಗದೆ ಹೋದಲ್ಲಿ ಅವರು ಕೋರ್ಟ್ ಮೆಟ್ಟಿಲೇರಬಹುದು.

ದೇಶಾದ್ಯಂತದ ವಿವಿಧ ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್, ನ್ಯಾಯಾಲಯಗಳಲ್ಲಿ  ಇತ್ಯರ್ಥವಾಗದೆ ಬಾಕಿ ಉಳಿದಿವೆ. ಅದರಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಪ್ರಕರಣಗಳು ಮೂರು ವರ್ಷಕ್ಕಿಂತ ಹಳೆಯ ಪ್ರಕರಣವಾಗಿದೆ. ಮಹಾರಾಷ್ಟ್ರದ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳ ಪೈಕಿ ಶೇಕಡ ಮೂವತ್ತೈದು ಪ್ರಕರಣಗಳು ಮೋಟಾರು ಅಪಘಾತಗಳಿಂದ ಉಂಟಾಗುವ ವಿಮಾ ಕ್ಲೈಮ್‌ಗಳಿಗೆ ಸಂಬಂಧಿಸಿವೆ.

ಕ್ಲೈಮ್ ಗೆ ಸಂಬಂಧಿಸಿದ ಹಳೆ ಪ್ರಕ್ರಿಯೆ ನಿಧಾನವಾಗುತ್ತದೆ. ಆದ್ರೆ ಹೊಸ ಅಪ್ಲಿಕೇಶನ್ ಅಪಘಾತವಾದ 48 ಗಂಟೆಗಳ ಒಳಗೆ ವಿವರಗಳನ್ನು ಅಪ್‌ಲೋಡ್ ಮಾಡುವುದು ಪೊಲೀಸರಿಗೆ ಕಡ್ಡಾಯವಾಗಿದೆ. ಈ ಮಾಹಿತಿಯನ್ನು ತಕ್ಷಣವೇ  ವಾಹನವನ್ನು ವಿಮೆ ಮಾಡಲಾಗಿರುವ ವಿಮಾ ಕಂಪನಿಗೆ ಮತ್ತು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

ಅದರ ನಂತರ, ಪೊಲೀಸರು 90 ದಿನಗಳಲ್ಲಿ ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ ನ್ಯಾಯಾಲಯಕ್ಕೆ ವಿವರವಾದ ಅಪಘಾತ ವರದಿಯೊಂದಿಗೆ ಹಕ್ಕುದಾರರನ್ನು ಹಾಜರುಪಡಿಸಬೇಕಾಗುತ್ತದೆ. ಇದು ಚಾರ್ಜ್ ಶೀಟ್, ಸಂತ್ರಸ್ಥರ ವಿವರ, ಹಕ್ಕುದಾರರ ಬಗ್ಗೆ ಮಾಹಿತಿ ಮತ್ತು ಸಂತ್ರಸ್ಥ ಮತ್ತು ಅವನ ಅವಲಂಬಿತರ ಆದಾಯದ ಪುರಾವೆಗಳಂತಹ ದಾಖಲೆಗಳನ್ನು ಒಳಗೊಂಡಿರುತ್ತದೆ.

ಪೊಲೀಸರು ಹಕ್ಕುದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಈ ದಾಖಲೆಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಈಗಿರುವ ಪ್ರಕ್ರಿಯೆಯಲ್ಲಿ, ಸುಳ್ಳು ದಾಖಲೆಗಳನ್ನು ನೀಡುವ ಸಾಧ್ಯತೆಯಿರುವ ಕಾರಣ  ಆ್ಯಪ್ ಅಭಿವೃದ್ಧಿಪಡಿಸಲಾಗ್ತಿದೆ.

ಅಪಘಾತ ವರದಿಯಾದ ನಂತರ, ಪೊಲೀಸರು ವಾಹನದ ಮಾಲೀಕರು ಮತ್ತು ವಿಮಾ ಕಂಪನಿಗೆ ಅವರ ಪ್ರತಿಕ್ರಿಯೆಗಾಗಿ ಮೋಟಾರು ವಾಹನ ಕಾಯ್ದೆಯಡಿ ನೋಟಿಸ್ ಕಳುಹಿಸಬೇಕು. ಇದು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅಪ್ಲಿಕೇಶನ್ ನಲ್ಲಿ ಎಲ್ಲವೂ ಸುಲಭವಾಗುತ್ತದೆ.

ಆ್ಯಪ್ ಅನ್ನು ಮೂರು ಡಿಜಿಟಲ್ ಡೇಟಾಬ್ಯಾಂಕ್‌ಗಳಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಪೊಲೀಸರು, ಮಾಲೀಕರನ್ನು ಅಥವಾ ವಿಮಾ ಕಂಪನಿಯನ್ನು ಪ್ರತ್ಯೇಕವಾಗಿ ಸಂಪರ್ಕಿಸಬೇಕಾಗುವುದಿಲ್ಲ. ಒಮ್ಮೆ ವಾಹನದ ಸಂಖ್ಯೆಯನ್ನು ಅಪ್ಲಿಕೇಶನ್‌ಗೆ ಫೀಡ್ ಮಾಡಿದರೆ, ಅದು ಸ್ವಯಂಚಾಲಿತವಾಗಿ ಫಲಿತಾಂಶವನ್ನು ತೋರಿಸುತ್ತದೆ.

ಆ್ಯಪ್ ಪೊಲೀಸರ ಸಮಯ ಉಳಿಸಲಿದೆ. ಮಾಲೀಕರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ವಿಮೆ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ಅನೇಕ ಪ್ರಕರಣಗಳಲ್ಲಿ, ವಕೀಲರು ಪೊಲೀಸರೊಂದಿಗೆ ಶಾಮೀಲಾಗಿ ಸುಳ್ಳು ದಾವೆಗಳನ್ನು ಸಲ್ಲಿಸುವುದು ಕಂಡುಬಂದಿದೆ. ಆದ್ರೆ ಅಪ್ಲಿಕೇಷನ್ ನಂತ್ರ ಇದು ಸಾಧ್ಯವಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...