alex Certify ಅಧಿಕಾರವಿದೆ ಎಂಬ ಕಾರಣಕ್ಕೆ ಜನರನ್ನು ಬಂಧಿಸೋದು ತಪ್ಪು: ಪೊಲೀಸ್​ ಇಲಾಖೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರವಿದೆ ಎಂಬ ಕಾರಣಕ್ಕೆ ಜನರನ್ನು ಬಂಧಿಸೋದು ತಪ್ಪು: ಪೊಲೀಸ್​ ಇಲಾಖೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ನಿಮ್ಮ ಕೈಯಲ್ಲಿ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಜನರನ್ನು ಬಂಧಿಸಿ ಅವರ ಮೇಲೆ ಚಾರ್ಜ್​ಶೀಟ್​​ ಹಾಕಬೇಡಿ ಎಂದು ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಹೇಳಿದೆ.

ಬಂಧನದಿಂದಾಗಿ ವ್ಯಕ್ತಿಯ ಸಾಮಾಜಿಕ ಪ್ರತಿಷ್ಠೆ ಹಾಗೂ ಸ್ವಾಭಿಮಾನಕ್ಕೆ ಅತಿಯಾದ ಹಾನಿ ಉಂಟಾಗಬಹುದು. ಹೀಗಾಗಿ ನಿಮಗೆ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಬಂಧನವನ್ನು ಒಂದು ಸಾಮಾನ್ಯ ವಿಷಯದಂತೆ ಪರಿಗಣಿಸಬೇಡಿ ಎಂದು ಪೊಲೀಸ್​ ಅಧಿಕಾರಿಗಳಿಗೆ ಹೇಳಿದೆ.

ವೈಯಕ್ತಿಕ ಸ್ವಾತಂತ್ರ್ಯ ಅನ್ನೋದು ಸಂವಿಧಾನದ ಪ್ರಮುಖ ಅಂಶವಾಗಿದೆ ಎಂದು ನ್ಯಾಯಮೂರ್ತಿ ಸಂಜಯ್​ ಕಿಶನ್​ ಕೌಲ್​ ಹಾಗೂ ಹೃಷಿಕೇಶ್​ ನೇತೃತ್ವದ ನ್ಯಾಯಪೀಠ ಹೇಳಿದೆ.

ವ್ಯಕ್ತಿಯನ್ನು ಜೈಲಿಗಟ್ಟದೆಯೇ ತನಿಖೆ ಪೂರ್ಣಗೊಳಿಸುವ ಅವಕಾಶ ಇರುವಂತಹ ಸಂದರ್ಭದಲ್ಲಿಯೂ ಅಮಾಯಕರನ್ನ ಜೈಲಿಗೆ ಕಳಿಸೋದು ತಪ್ಪು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...