
ಮಂಡ್ಯ: ಎಸ್.ಟಿ. ಸಮುದಾಯಕ್ಕೆ ಶೇಕಡ ಮೂರರಿಂದ ಶೇಕಡ 7 ರಷ್ಟು ಮೀಸಲಾತಿ ಹೆಚ್ಚಾಗಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮೀಸಲಾತಿ ಶೇಕಡ 15 ರಿಂದ ಶೇಕಡ 17ರಷ್ಟು ಆಗಬೇಕು. ಬಿಜೆಪಿಯವರು ಮೀಸಲಾತಿ ನೀಡಲು ವಿರೋಧಿಸುತ್ತಿದ್ದಾರೆ. 2020ರಲ್ಲಿ ನಾಗಮೋಹನ ದಾಸ್ ಸಮಿತಿ ವರದಿ ನೀಡಿದೆ. ಆಯೋಗ ವರದಿ ನೀಡಿದಾಗ ಬಿಜೆಪಿ ಸರ್ಕಾರವಿತ್ತು. ವರದಿ ನೀಡಿ ಎರಡು ವರ್ಷ ಕಳೆದರೂ ಮೀಸಲಾತಿ ಜಾರಿ ಮಾಡಿಲ್ಲ ಎಂದು ದೂರಿದ್ದಾರೆ.
ಎಸ್.ಟಿ. ಸಮುದಾಯ ಮೀಸಲಾತಿಗೆ ಒತ್ತಾಯ ಮಾಡುತ್ತಿದೆ. ನಾಗಮೋಹನದಾಸ್ ಸಮಿತಿ ವರದಿಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.