ಅತಿಯಾದ ಆಲ್ಕೋಹಾಲ್ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ ವ್ಯಕ್ತಿಯ ಕಾನೂನು ಉತ್ತರಾಧಿಕಾರಿಗೆ ವಿಮೆ ಹಕ್ಕು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅಪಘಾತದಿಂದ ಸಾವನ್ನಪ್ಪಿದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ ಆತನ ಕಾನೂನು ಉತ್ತರಾಧಿಕಾರಿ ವಿಮೆಗೆ ಜವಾಬ್ದಾರನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಎಂ.ಶಂತನಗೌಡರ್ ಮತ್ತು ವಿನೀತ್ ಸರನ್ ನ್ಯಾಯಪೀಠ, ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ಆದೇಶಗಳನ್ನು ಎತ್ತಿಹಿಡಿದಿದೆ. ಸಾವು ಆಕಸ್ಮಿಕವಲ್ಲ. ಆದ್ದರಿಂದ, ಸತ್ತವರ ಪ್ರಾಣಹಾನಿಯನ್ನು ಸರಿದೂಗಿಸಲು ಸಂಸ್ಥೆಗೆ ಯಾವುದೇ ಶಾಸನಬದ್ಧ ಬಾಧ್ಯತೆಯಿಲ್ಲ ಎಂದು ಎನ್ಸಿಡಿಆರ್ಸಿ ಹೇಳಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನಂತ್ರ ರಾಷ್ಟ್ರೀಯ ಆಯೋಗವು ಅಂಗೀಕರಿಸಿದ ಏಪ್ರಿಲ್ 24, 2009 ರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಕ್ಟೋಬರ್ 8, 1997ರಂದು ಶಿಮ್ಲಾ ಜಿಲ್ಲೆಯ ಚೌಪಾಲ್ ನ ರಾಜ್ಯ ಅರಣ್ಯ ನಿಗಮದಲ್ಲಿ ಕಾವಲುಗಾರನಾಗಿ ಕೆಲಸ ಮಾಡ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದ. ಆತನ ಕಾನೂನು ಉತ್ತರಾಧಿಕಾರಿ ನಾರದಾದೇವಿ ವಿಮೆ ಹಕ್ಕಿಗೆ ಅರ್ಜಿ ಸಲ್ಲಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅತಿಯಾದ ಮದ್ಯ ಸೇವನೆ ಸಾವಿಗೆ ಕಾರಣವೆಂಬ ವರದಿ ಬಂದಿತ್ತು. ಇದ್ರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ,