alex Certify BREAKING : ಕರ್ನಾಟಕಕ್ಕೆ ಬಿಗ್ ಶಾಕ್ :ಪ್ರತಿದಿನ 5,000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ|Supreme Court | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಕರ್ನಾಟಕಕ್ಕೆ ಬಿಗ್ ಶಾಕ್ :ಪ್ರತಿದಿನ 5,000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ|Supreme Court

ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಕರ್ನಾಟಕ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದದ ಸಂಬಂಧ ಇಂದು ಸುಪ್ರೀಂಕೋರ್ಟ್​ ನ್ಯಾ.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಕಾವೇರಿ ಅರ್ಜಿ ವಿಚಾರಣೆ ನಡೆದಿದ್ದು, ಹಿರಿಯ ವಕೀಲ ಮುಕುಲ್ ರೋಹ್ಟಗಿ ತಮಿಳುನಾಡು ಪರ ವಾದ ಮಂಡಿಸಿದ್ದು, ನಾವು ಬಹಳಷ್ಟು ಕಡಿಮೆ ನೀರು ಪಡೆಯುತ್ತಿದ್ದೇವೆ. ಸಿಡಬ್ಲ್ಯೂಎಂಎ ಆದೇಶದಂತೆ ನೀರು ಪಡೆಯುತ್ತಿಲ್ಲ. ಸಂಕಷ್ಟ ಸೂತ್ರದ ಪಾಲನೆ  ಆಗುತ್ತಿಲ್ಲ. CWRC ನೀರು ಬಿಡಗುಡೆ ಮಟ್ಟವನ್ನು ನಿರ್ದೇಶಿಸಿ ಕರ್ನಾಟಕ್ಕೆ ಆದೇಶ ನೀಡಿದೆ. ಆದರೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀರಿನ ಪ್ರಮಾಣ ಕಡಿಮೆ ಮಾಡಿದೆ. ಕರ್ನಾಟಕ ನಿರಂತರವಾಗಿ ಕಡಿಮೆ ನೀರು ಬಿಡುತ್ತಿದೆ. ಕರ್ನಾಟಕ ಕೇವಲ 2,500 ಕ್ಯುಸೆಕ್ ನೀರು ಹರಿಸುತ್ತಿದೆ. ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಗೆ ಕೋರ್ಟ್ ಗೆ ಕರ್ನಾಟಕ ಪರ ವಕೀಲ ಶ್ಯಾಮದಿವಾನ್ ವಾದ ಮಂಡಿಸಿದ್ದು,CWMA ಕೊಟ್ಟಿರುವ ಆದೇಶ ಪಾಲಿಸಿದ್ದೇವೆ, ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು.

ತಮಿಳುನಾಡು, ಕರ್ನಾಟಕದ ವಾದ ಆಲಿಸಿದ ನ್ಯಾಯಪೀಠ, ಕರ್ನಾಟಕ ಪ್ರತಿ ದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು, ಮುಂದಿನ 15 ದಿನಗಳ ಕಾಲ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ.

ಸೆಪ್ಟೆಂಬರ್ 26 ತನಕ ತಮಿಳುನಾಡಿಗೆ ನಿತ್ಯವೂ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.  ವಸ್ತುಸ್ಥಿತಿ ಅರಿಯುವಲ್ಲಿ ಪ್ರಾಧಿಕಾರ ವಿಫಲವಾಗಿದೆ. ಒಳಹರಿವು ಕಡಿಮೆಯಾಗಿರುವುದರಿಂದ ನೀರು ಹರಿಸುವುದು ಕಷ್ಟವಾಗುತ್ತಿದೆ. ಪ್ರಾಧಿಕಾರದ ಹಿಂದಿನ ಎಲ್ಲ ಆದೇಶಗಳನ್ನು ನಾವು ಪಾಲಿಸಿದ್ದೇವೆ. ಹೀಗಾಗಿ ಪ್ರಾಧಿಕಾರದ ಪ್ರಸ್ತುತ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...