alex Certify ಗಮನಿಸಿ: ಸ್ಟೇಟ್ ಬ್ಯಾಂಕ್‌ನಿಂದ ಆರ್ಥಿಕ ಶಿಕ್ಷಣದ ಕೋರ್ಸ್‌ಗಳಿಗೆ ನೋಂದಣಿ ಆರಂಭ; ಇಲ್ಲಿದೆ ಶುಲ್ಕ ಸೇರಿದಂತೆ ಇನ್ನಿತರೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಸ್ಟೇಟ್ ಬ್ಯಾಂಕ್‌ನಿಂದ ಆರ್ಥಿಕ ಶಿಕ್ಷಣದ ಕೋರ್ಸ್‌ಗಳಿಗೆ ನೋಂದಣಿ ಆರಂಭ; ಇಲ್ಲಿದೆ ಶುಲ್ಕ ಸೇರಿದಂತೆ ಇನ್ನಿತರೆ ವಿವರ

ಎನ್‌ಎಸ್‌ಇ ಅಕಾಡೆಮಿಯೊಂದಿಗೆ ಸಹಯೋಗದಲ್ಲಿ ಆರ್ಥಿಕ ಸಾಕ್ಷರತೆ ಕುರಿತು ಜಾಗೃತಿ ಮೂಡಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ಐದು ಆನ್ಲೈನ್ ಕೋರ್ಸ್‌ಗಳನ್ನು ಘೋಷಿಸಿದೆ.

ಕೆಳಕಂಡ ಐದು ಕೋರ್ಸ್‌ಗಳನ್ನು ಬ್ಯಾಂಕಿಂಗ್‌-ಟು-ಬ್ಯಾಂಕಿಂಗ್‌ನ ವಿವಿಧ ಆಯಾಮಗಳ ಕುರಿತು ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ಇತರರಿಗೆ ಕಲಿಸಿಕೊಡಲಾಗಿದೆ.

BIG NEWS: ಮಾರ್ಚ್ 4 ರಂದು ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್: ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ

1. ’ಬ್ಯಾಂಕಿಂಗ್ ಫಂಡಮೆಂಟಲ್ಸ್‌’ ಬ್ಯಾಂಕಿಂಗ್‌ನ ಮೂಲ ಜ್ಞಾನ ಹೇಳಿಕೊಡುತ್ತದೆ. ಕೋರ್ಸ್‌ನ ಶುಲ್ಕ 7,080 ರೂಪಾಯಿ.

2. ’ಎಂಎಸ್‌ಎಂಇ ಲೆಂಡಿಂಗ್ ಇನ್ ಎ ನಟ್‌ಶೆಲ್’ ಕೋರ್ಸ್‌ ಅನ್ನು ವಿಶೇಷವಾಗಿ ಎಸ್‌‌ಎಂಇ ಉದ್ಯಮಶೀಲರಿಗೆ, ಬ್ಯಾಂಕಿಂಗ್‌ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಈ ಕೋರ್ಸ್‌ನ ಶುಲ್ಕ 8,620 ರೂಪಾಯಿ.

3. ’ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಂ ಇನ್ ಇಂಡಿಯಾ’ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳ ಕುರಿತು ಮೂಲ ಮಾಹಿತಿ ಕೊಡುತ್ತದೆ. ಈ ಕೋರ್ಸ್‌ನ ಶುಲ್ಕ 5,900 ರೂಪಾಯಿ.

4. ’ಪ್ರಯಾರಿಟಿ ಸೆಕ್ಟರ್‌ ಲೆಂಡಿಂಗ್ ನಾರ್ಮ್ಸ್’ ಲಕೋರ್ಸ್ ಮೂಲಕ ಆದ್ಯತೆಯ ಕ್ಷೇತ್ರಗಳಿಗೆ ಸಾಲ ನೀಡುವುದು ಮುಂತಾದ ವಿಚಾರಗಳ ಕುರಿತು ಮಾರ್ಗಸೂಚಿಗಳನ್ನು ಕೊಡುತ್ತದೆ. ‌ಈ ಕೋರ್ಸ್‌ನ ಶುಲ್ಕ 7,080 ರೂ.ಗಳು.

5. ’ಎನ್‌ಆರ್‌ಐ ಬ್ಯುಸಿನೆಸ್ & ಕಾಂಪ್ಲಯನ್ಸ್‌’ ಆಸಕ್ತರಿಗೆ ಎನ್‌ಆರ್‌ಐ ಉದ್ಯಮಗಳು ಹಾಗೂ ನಿಯಮಗಳ ಕುರಿತು ಮಾಹಿತಿ ಒದಗಿಸುತ್ತದೆ. ಈ ಕೋರ್ಸ್‌ನ ಶುಲ್ಕ 8,850 ರೂಪಾಯಿ.

ಈ ಕೋರ್ಸ್‌ಗಳಿಗೆ ದಾಖಲಾತಿ ಆರಂಭಗೊಂಡಿದೆ. ಕೋರ್ಸ್‌ನ ಅವಧಿಯು 3-6 ವಾರಗಳ ಮಟ್ಟಿಗೆ ಇರುತ್ತದೆ ಹಾಗೂ ಆಸಕ್ತರು ಪ್ರತಿ ವಾರ 2-3 ಗಂಟೆಗಳ ಕಾಲ ಕೋರ್ಸ್ ಮೇಲೆ ಗಮನ ಕೊಡಬೇಕಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...