
ಹುಬ್ಬಳ್ಳಿ: ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣವೇ ನಾಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ.
ಹುಬಳ್ಳಿಯ ಶಾಂತಿನಗರದ ನಿವಾಸಿ ಈಶ್ ಕೊಹ್ಲಿ ಎಂಬುವವರು ಎಸ್ ಬಿಐ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ 56 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದ್ದು, ಕಳ್ಳತನ ಪ್ರಕರಣ ದಾಖಲಿಸಿದ್ದಾರೆ.
ಈಶ್ ಕೊಹ್ಲಿ, ಕೇಶ್ವಾಪುರದ ಎಸ್ ಬಿಐ ಬ್ಯಾಂಕ್ ನಲ್ಲಿ 2013ರಲ್ಲಿ ತಂದೆ-ತಾಯಿ ಹೆಸರಲ್ಲಿ 2 ಲಾಕರ್ ತೆಗೆದುಕೊಂಡಿದ್ದರು. 2014ರಲ್ಲಿ 56 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ದಾಖಲೆ ಪತ್ರಗಳನ್ನು ಲಾಕರ್ ಗಳಲ್ಲಿ ಇಟ್ಟಿದ್ದರು. ಈವರೆಗೂ ಲಾಕರ್ ಬಾಡಿಗೆಯನ್ನು ಪಾವತಿಸುತ್ತಿದ್ದರು. ಈಗ ಬ್ಯಾಂಕ್ ಗೆ ಹೋಗಿ ಲಾಕರ್ ತೆಗೆದು ನೋಡಿದರೆ ಚಿನ್ನಾಭರಣ ಮಾಯವಾಗಿದೆ. ಒಂದು ಲಾಕರ್ ಓಪನ್ ಆಗದ ಸ್ಥಿತಿಯಲ್ಲಿದ್ದರೆ ಮತ್ತೊಂದು ಲಾಕರ್ ಓಪನ್ ಆಗಿದೆ.
ಈಗ ಚಿನ್ನಾಭರಣ ನಾಪತ್ತೆಯಾಗಿದ್ದು, ಕಂಗಾಲಾಗಿರುವ ಗ್ರಾಹಕ ಈಶ್ ಕೊಹ್ಲಿ, ಕಳ್ಳತನವಾಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.