ಡಿಜಿಟಲ್ ಯುಗದಲ್ಲಿ ನಮ್ಮ ಕೆಲಸ ಸುಲಭವಾಗಿದೆ. ಕ್ಯೂಆರ್ ಕೋಡ್ ಮೂಲಕ ಜನರು ಪಾವತಿ ಮಾಡ್ತಿದ್ದಾರೆ. ಆದ್ರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಾವತಿ ಮಾಡುವುದು ಜನರಿಗೆ ಎಷ್ಟು ಸುಲಭವಾಗಿದೆಯೋ ಅದೇ ರೀತಿ ಮೋಸಗಾರರ ಕೆಲಸವೂ ಸುಲಭವಾಗಿದೆ. ನಕಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ನೀಡಿ, ಜನರನ್ನು ಮೋಸಗೊಳಿಸುತ್ತಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಎಚ್ಚರಿಕೆ ನೀಡಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ವೇಳೆ ಜಾಗೃತೆಯಿಂದಿರುವಂತೆ ಬ್ಯಾಂಕ್ ಹೇಳಿದೆ. ಆನ್ಲೈನ್ ನಲ್ಲಿ ಅಥವಾ ಮೆಸ್ಸೇಜ್ ಮೂಲಕ ಹಂಚಿಕೊಂಡ ಕ್ಯೂಆರ್ ಕೋಡ್ ಎಂದಿಗೂ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಕೊರೊನಾ ಸಂದರ್ಭದಲ್ಲಿ, ಆನ್ಲೈನ್ ವಹಿವಾಟು ಅನಿವಾರ್ಯವಾಗಿದೆ. ಆದ್ರೆ ಆನ್ಲೈನ್ ಪಾವತಿ ವೇಳೆ ಹೆಚ್ಚು ಎಚ್ಚರಿಕೆ ವಹಿಸಬೇಕು.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಎಂದಿಗೂ ನಿಮಗೆ ಹಣ ಸಿಗುವುದಿಲ್ಲ. ಪಾವತಿ ಮಾಡುವಾಗ ಮಾತ್ರ ಕ್ಯೂಆರ್ ಕೋಡ್ ಬಳಸಲಾಗುತ್ತದೆ. ಹಾಗಾಗಿ ಯಾವುದೇ ಪಾವತಿ ಇಲ್ಲದಿದ್ದಾಗ, ಹಣ ನೀಡುತ್ತೇವೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಂದಾಗ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಈ ಸಂಬಂಧ ಎಸ್ಬಿಐ ಬ್ಯಾಂಕ್ 2.5 ನಿಮಿಷದ ವಿಡಿಯೋ ಹಂಚಿಕೊಳ್ಳುವ ಮೂಲಕ, ಜನರನ್ನು ಜಾಗೃತಿಗೊಳಿಸುವ ಪ್ರಯತ್ನ ನಡೆಸಿದೆ.
https://twitter.com/TheOfficialSBI/status/1386954800302944256?ref_src=twsrc%5Etfw%7Ctwcamp%5Etweetembed%7Ctwterm%5E1386954800302944256%7Ctwgr%5E%7Ctwcon%5Es1_&ref_url=https%3A%2F%2Fwww.livemint.com%2Fmoney%2Fpersonal-finance%2Fsbi-warns-its-account-holders-beware-of-qr-code-fraud-11619580559239.html