alex Certify ಸುಲಭವಾಗಿದೆ ಪಿಂಚಣಿದಾರರ ಕೆಲಸ: ವಿಡಿಯೋ ‘ಜೀವನ ಪ್ರಮಾಣ ಪತ್ರ’ ಸಲ್ಲಿಕೆಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿದೆ ಪಿಂಚಣಿದಾರರ ಕೆಲಸ: ವಿಡಿಯೋ ‘ಜೀವನ ಪ್ರಮಾಣ ಪತ್ರ’ ಸಲ್ಲಿಕೆಗೆ ಅವಕಾಶ

ಪಿಂಚಣಿದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಂಚಣಿದಾರರು, ಪಿಂಚಣಿಗಾಗಿ ಪ್ರತಿ ವರ್ಷ ನವೆಂಬರ್ ಅಂತ್ಯದೊಳಗೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹಿರಿಯ ನಾಗರಿಕರು ಇದನ್ನು ಆನ್‌ಲೈನ್‌ನಲ್ಲಿ ಅಥವಾ ಅವರ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀಡಬೇಕಾಗುತ್ತದೆ. ಆದ್ರೆ ಈ ಪ್ರಕ್ರಿಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಲಭಗೊಳಿಸಿದೆ. ಬ್ಯಾಂಕ್ ವೀಡಿಯೊ ಕರೆ ಸೌಲಭ್ಯವನ್ನು ಪಿಂಚಣಿದಾರರಿಗೆ ನೀಡಿದೆ.

SBI ಕ್ರೆಡಿಟ್‌ ಕಾರ್ಡ್‌ ಹೊಂದಿದವರಿಗೆ ಮತ್ತೊಂದು ಶಾಕ್

ಪಿಂಚಣಿದಾರರು ಮನೆಯಲ್ಲಿಯೇ ಕುಳಿತು, ವಿಡಿಯೋ ಕರೆ ಮಾಡುವ ಮೂಲಕ, ಜೀವನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು, ಪಿಂಚಣಿದಾರರನ್ನು ಡಿಜಿಟಲ್‌ನಲ್ಲಿ ಸಬಲಗೊಳಿಸುತ್ತದೆ ಮತ್ತು ಕೋವಿಡ್-19 ಮಧ್ಯೆ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ತೊಂದರೆಯನ್ನು ತಪ್ಪಿಸುತ್ತದೆ ಎಂದಿದ್ದಾರೆ. ಶಾಖೆಗೆ ಬಂದು, ಸಾಲಿನಲ್ಲಿ ನಿಂತು ಸಮಸ್ಯೆ ಎದುರಿಸಬೇಕಾಗಿಲ್ಲ. ಮನೆಯಲ್ಲೇ ಆರಾಮವಾಗಿ ಕುಳಿತು, ಪಿಂಚಣಿದಾರರು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದು.

ವೀಡಿಯೊ ಕರೆ ಮಾಡುವುದು ಸುಲಭ. ಅನುಮತಿ ಪಡೆದ ತಕ್ಷಣ ನೀವು ವಿಡಿಯೋ ಕರೆ ಮಾಡಿದ್ರೆ ಎಸ್ಬಿಐ ಅಧಿಕಾರಿಗಳು ಅದನ್ನು ಸ್ವೀಕರಿಸುತ್ತಾರೆ.

ವೀಡಿಯೊ ಕರೆಯ ಸಮಯದಲ್ಲಿ, ಅಧಿಕಾರಿಯು ಪರದೆಯ ಮೇಲೆ 4-ಅಂಕಿಯ ಪರಿಶೀಲನೆ ಕೋಡ್ ನಮೂದಿಸಲು ಕೇಳುತ್ತಾರೆ. ಅಧಿಕಾರಿಗಳಿಗೆ ಪಾನ್ ಕಾರ್ಡ್ ತೋರಿಸಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಯು ಪಿಂಚಣಿದಾರರ ಫೋಟೋ ಕ್ಲಿಕ್ಕಿಸುತ್ತಾರೆ. ಲೈಫ್ ಸರ್ಟಿಫಿಕೇಟ್ ಪರಿಶೀಲನೆಯನ್ನು ಅಲ್ಲಿಯೇ ಪೂರ್ಣಗೊಳಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...