ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 30ರೊಳಗೆ ಪಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. ಒಂದು ವೇಳೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಖಾತೆ ರದ್ದುಗೊಳಿಸುವುದಾಗಿ ಹೇಳಿದೆ.
ಎಸ್ಬಿಐ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಖಾತೆ ಸಕ್ರಿಯವಾಗಿರಬೇಕೆಂದಲ್ಲಿ ಆಧಾರ್-ಪಾನ್ ಲಿಂಕ್ ಇಂದೇ ಮಾಡಿ. ಪ್ರತಿಯೊಬ್ಬರು ಪಾನ್ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದಕ್ಕೆ ಸೆಪ್ಟೆಂಬರ್ 30 ಕೊನೆ ದಿನವಾಗಿದೆ.
ನಿಗಧಿತ ಸಮಯದಲ್ಲಿ ಕೆಲಸ ಮಾಡದೆ ಹೋದಲ್ಲಿ ಖಾತೆ ರದ್ದಾಗುತ್ತದೆ. ಖಾತೆಯಲ್ಲಿರುವ ಹಣ ನಿಮಗೆ ಸಿಗುವುದಿಲ್ಲ. ಜೊತೆಗೆ ಸರ್ಕಾರಿ ಯೋಜನೆಯ ಲಾಭ ಸಿಗುವುದಿಲ್ಲ. ಪಾನ್ –ಆಧಾರ್ ಲಿಂಕ್ ಈಗಾಗಲೇ ಆಗಿದ್ದರೆ ಮತ್ತೆ ಲಿಂಕ್ ಮಾಡುವ ಅಗತ್ಯವಿಲ್ಲ. ಜುಲೈ 2017ರಲ್ಲಿ ಮೊದಲ ಬಾರಿ ಪಾನ್-ಆಧಾರ್ ಲಿಂಕ್ ಗೆ ಸರ್ಕಾರ ಗುಡುವು ನೀಡಿತ್ತು. ಅದ್ರ ನಂತ್ರ ಅನೇಕ ಬಾರಿ ಗಡುವು ವಿಸ್ತರಿಸಿದೆ.
ಆಧಾರ್-ಪಾನ್ ಕಾರ್ಡನ್ನು ಎಸ್ಎಂಎಸ್ ಮೂಲಕ ಅಥವಾ ಆದಾಯ ತೆರಿಗೆ ವೆಬ್ಸೈಟ್ ಮೂಲಕ ಲಿಂಕ್ ಮಾಡಬಹುದು. ಎಸ್ಎಂಎಸ್ ಮಾಡಲು ಬಯಸುವವರು ಯುಐಡಿಪಿಎನ್ <ಸ್ಪೇಸ್> 12 ಅಂಕೆ ಆಧಾರ್ ಸಂಖ್ಯೆ <ಸ್ಪೇಸ್> 10 ಅಂಕಿಯ ಪಾನ್ ಸಂಖ್ಯೆಯನ್ನು 567678 ಅಥವಾ 56161 ಗೆ ಎಸ್ಎಂಎಸ್ ಮಾಡಬೇಕು.