alex Certify SBI ಈ ಯೋಜನೆ ಲಾಭ ಪಡೆಯಲು ಸೆ.14ರವರೆಗಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಈ ಯೋಜನೆ ಲಾಭ ಪಡೆಯಲು ಸೆ.14ರವರೆಗಿದೆ ಅವಕಾಶ

ದೇಶದ ಅತಿ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ, ಹೊಸ ಯೋಜನೆಯೊಂದನ್ನು ಪರಿಚಯಿಸಿತ್ತು. ಎಸ್‌ಬಿಐ ಇದಕ್ಕೆ ಪ್ಲಾಟಿನಂ ಠೇವಣಿ ಎಂದು ಹೆಸರಿಟ್ಟಿದೆ. ಈ ಯೋಜನೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಈ ವಿಶೇಷ ಠೇವಣಿ, ಗ್ರಾಹಕರಿಗೆ ಸೆಪ್ಟೆಂಬರ್ 14ರವರೆಗೆ ಲಭ್ಯವಿರಲಿದೆ.

ಈ ಬಗ್ಗೆ ಎಸ್ಬಿಐ ಟ್ವೀಟ್ ಮಾಡಿದೆ. ಈ ಯೋಜನೆಯಡಿ, ಗ್ರಾಹಕರು ಹಣವನ್ನು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ಠೇವಣಿ ಇಡಬಹುದಾಗಿದೆ. ಹೊಸ ಮತ್ತು ನವೀಕರಣ ಠೇವಣಿಗಳನ್ನು ಸಹ ಇದರಲ್ಲಿ ಮಾಡಬಹುದು.

ಈ ಯೋಜನೆಯಡಿ ಗ್ರಾಹಕರಿಗೆ ಸಿಗುವ ಬಡ್ಡಿ ವಿವರ ಹೀಗಿದೆ :

ಪ್ಲಾಟಿನಂ 75 ದಿನಗಳು – 3.95 ಶೇಕಡಾ

ಪ್ಲಾಟಿನಂ 525 ದಿನಗಳು – 5.10 ಶೇಕಡಾ

ಪ್ಲಾಟಿನಂ 2250 ದಿನಗಳು – 5.55 ಪ್ರತಿಶತ

ಹಿರಿಯ ನಾಗರಿಕರಿಗೆ ಬಡ್ಡಿ ದರಗಳು

ಪ್ಲಾಟಿನಂ 75 ದಿನಗಳು – ಶೇಕಡಾ 4.45

ಪ್ಲಾಟಿನಂ 525 ದಿನಗಳು – ಶೇಕಡಾ 5.60

ಪ್ಲಾಟಿನಂ 2250 ದಿನಗಳು – ಶೇಕಡಾ 6.20

ಎಸ್‌ಬಿಐ ಪ್ಲಾಟಿನಂ ಎಫ್‌ಡಿ ಯೋಜನೆಯಡಿ, ಗ್ರಾಹಕರಿಗೆ ಮಾಸಿಕ ಮತ್ತು ತ್ರೈಮಾಸಿಕದಲ್ಲಿ ಬಡ್ಡಿ ಪಾವತಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...