ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ತಿಂಗಳು ಸೀಮಿತ ಅವಧಿಯ ವಿಶೇಷ ಠೇವಣಿ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಗೆ ಬ್ಯಾಂಕ್, ಪ್ಲಾಟಿನಂ ಠೇವಣಿ ಯೋಜನೆ ಎಂದು ಹೆಸರಿಟ್ಟಿತ್ತು. 15 ಆಗಸ್ಟ್ 2021 ರಿಂದ ಜಾರಿಗೆ ಬಂದ ಈ ಯೋಜನೆ ಇಂದು ಮುಕ್ತಾಯಗೊಳ್ಳಲಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಇಂದು ಕೊನೆಯ ದಿನವಾಗಿದೆ. ಎಸ್‌ಬಿಐ ಪ್ಲಾಟಿನಂ ಠೇವಣಿ ಯೋಜನೆ, ಗ್ರಾಹಕರಿಗೆ ಹೆಚ್ಚುವರಿ ಬಡ್ಡಿ ಪ್ರಯೋಜನ ನೀಡುತ್ತಿದೆ.
‘ಆರ್ಥಿಕ’ ಸಮಸ್ಯೆಗೆ ನಿಮ್ಮಲ್ಲೇ ಇದೆ ಪರಿಹಾರ
ಎಸ್‌ಬಿಐ ಪ್ಲಾಟಿನಂ ಠೇವಣಿಗಳ ಅಡಿಯಲ್ಲಿ, ಗ್ರಾಹಕರು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ಸ್ಥಿರ ಠೇವಣಿ ಇಡಬಹುದು. ಪ್ಲಾಟಿನಂ 75 ದಿನಗಳ ಠೇವಣಿಗೆ ಶೇಕಡಾ 3.95 ರಷ್ಟು ಬಡ್ಡಿ ಸಿಗಲಿದೆ. ಪ್ಲಾಟಿನಂ 525 ದಿನಗಳ ಠೇವಣಿಗೆ ಶೇಕಡಾ 5.10ರಷ್ಟು ಬಡ್ಡಿ ಸಿಗಲಿದೆ. ಪ್ಲಾಟಿನಂ 2250 ದಿನ ಠೇವಣಿಯಲ್ಲಿ ಶೇಕಡಾ 5.55ರಷ್ಟು ಬಡ್ಡಿ ಸಿಗ್ತಿದೆ.
ಹಿರಿಯ ನಾಗರಿಕರಿಗೆ ಪ್ಲಾಟಿನಂ 75 ದಿನಗಳ ಠೇವಣಿ ಮೇಲೆ ಶೇಕಡಾ 4.45ರಷ್ಟು ಬಡ್ಡಿ ಸಿಗಲಿದೆ. ಸಾಮಾನ್ಯ ಬಡ್ಡಿ ದರ 4.40ರಷ್ಟಿದೆ. ಪ್ಲಾಟಿನಂ 75 ದಿನಗಳ ಠೇವಣಿ ಮೇಲೆ ಶೇಕಡ 5.60ರಷ್ಟು ಬಡ್ಡಿ ಸಿಗಲಿದೆ. ಪ್ಲಾಟಿನಂ 2250 ದಿನಗಳ ಠೇವಣಿ ಮೇಲೆ ಶೇಕಡ 5.60ರಷ್ಟು ಬಡ್ಡಿ ಸಿಗಲಿದೆ.