ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಮಹತ್ವದ ಮಾಹಿತಿ ನೀಡಿದೆ. ಟ್ವಿಟರ್ ಮೂಲಕ ಬ್ಯಾಂಕ್ ಗ್ರಾಹಕರಿಗೆ ಸೂಚನೆಯೊಂದನ್ನು ನೀಡಿದೆ. ಬ್ಯಾಂಕಿಂಗ್ ಗೆ ಸಂಬಂಧಿತ ಕೆಲಸಗಳನ್ನು ಮುಂಚಿತವಾಗಿ ಇತ್ಯರ್ಥಗೊಳಿಸುವಂತೆ ಮನವಿ ಮಾಡಿದೆ.
ಸಿಸ್ಟಂ ನಿರ್ವಹಣೆಯಿಂದಾಗಿ ಬ್ಯಾಂಕಿನ ಕೆಲವು ಸೇವೆಗಳು ಆಗಸ್ಟ್ 6 ಮತ್ತು 7 ರಂದು ಸ್ವಲ್ಪ ಸಮಯ ಬಂದ್ ಆಗಲಿದೆ. ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯೋನೊ ಲೈಟ್ ಮತ್ತು ಯುಪಿಐ ಸೇವೆ ಬಂದ್ ಆಗಲಿದೆ. ಆಗಸ್ಟ್ 6 ಮತ್ತು 7 ರ ರಾತ್ರಿ 10.45 ರಿಂದ 1.15 ರ ವರೆಗೆ ಈ ಸೇವೆಗಳು ಲಭ್ಯವಿರುವುದಿಲ್ಲವೆಂದು ಬ್ಯಾಂಕ್ ಟ್ವೀಟ್ ಮಾಡಿದೆ.
ಎಸ್‌ಬಿಐ ನೀಡಿದ ಮಾಹಿತಿಯ ಪ್ರಕಾರ, ಬ್ಯಾಂಕ್ ತನ್ನ ಯುಪಿಐ ಪ್ಲಾಟ್‌ಫಾರ್ಮನ್ನು ಅಪ್‌ಗ್ರೇಡ್ ಮಾಡಲಿದೆ. ಈ ಸಮಯದಲ್ಲಿ ಯುಪಿಐ ವಹಿವಾಟು ಬಂದ್ ಆಗಲಿದೆ. ಇದಕ್ಕೂ ಮುನ್ನ ಜುಲೈ 16 ಮತ್ತು 17 ರಂದು, ಬ್ಯಾಂಕ್ ಈ ಸೇವೆಗಳನ್ನು ರಾತ್ರಿ 10.45 ರಿಂದ ರಾತ್ರಿ 1.15 ರವರೆಗೆ ನಿಲ್ಲಿಸಿತ್ತು.