ಬಹಳ ಸಲ ಹೀಗಾಗುತ್ತದೆ. ಬ್ಯಾಂಕ್ ಗೆ ನೀಡಿರುವ ನಮ್ಮ ಮೊಬೈಲ್ ಸಂಖ್ಯೆಯು ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹಾಗಾದಾಗ ಬ್ಯಾಂಕ್ ಖಾತೆಯಲ್ಲಿನ ಜಮೆ ಮತ್ತು ಹಣ ಪಡೆಯುವಿಕೆಯ ಮಾಹಿತಿಯು ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಬರುವುದು ತಪ್ಪಿಹೋಗುವ ಆತಂಕ ಇರುತ್ತದೆ. ಎಟಿಎಂನಿಂದ ಹಣ ಪಡೆದಾಗ, ಸ್ನೇಹಿತರೊಬ್ಬರು ಹಣವನ್ನು ನಮ್ಮ ಖಾತೆಗೆ ಜಮೆ ಮಾಡಿದಾಗ ಆ ವಹಿವಾಟಿನ ನಂತರದ ಬ್ಯಾಲೆನ್ಸ್ ಕುರಿತು ಎಸ್ಎಂಎಸ್ ಬಂದುಬಿಟ್ಟರೆ ಸಮಾಧಾನ ಹಾಗೂ ಖಾತರಿ ಕೂಡ.
ಹೀಗಾಗಿಯೇ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ.)ನವರು ಆನ್ಲೈನ್ನಲ್ಲಿಯೇ ಮೊಬೈಲ್ ಸಂಖ್ಯೆ ಬದಲಾವಣೆಗೆ ಅವಕಾಶ ಕಲ್ಪಿಸಿದ್ದಾರೆ. ಎಸ್.ಬಿ.ಐ. ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯು ನಿಮ್ಮ ನೆರವಿಗೆ ಬರಲಿದೆ.
ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ, www.onlinesbi.com ವೆಬ್ಸೈಟ್ಗೆ ಭೇಟಿ ನೀಡುವುದು. ಅಲ್ಲಿನ My Accounts ವಿಭಾಗದಲ್ಲಿ Profile-Personal Details-Change mobile No. ಆಯ್ಕೆ ಮಾಡುವುದು.
BIG BREAKING: 24 ಗಂಟೆಯಲ್ಲಿ ಮತ್ತೆ 9,119 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 396 ಜನ ಬಲಿ
ನಂತರ ತೆರೆಯುವ ಪೇಜ್ನಲ್ಲಿ ನಿಮ್ಮ ಉಳಿತಾಯ ಖಾತೆಯ ಸಂಖ್ಯೆ ಸಮೂದಿಸಿ ಅಥವಾ ಕಂಡುಬಂದಲ್ಲಿ ಆಯ್ಕೆ ಮಾಡಿರಿ. ಇದರ ಕೆಳಗಿರುವ ಮೊಬೈಲ್ ಸಂಖ್ಯೆ ಬಾಕ್ಸ್ನಲ್ಲಿ ನಿಮ್ಮ ಹೊಸ ಮೊಬೈಲ್ ಸಂಖ್ಯೆ ನಮೂದಿಸಿರಿ. ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕಿಗಳು ಮಾತ್ರವೇ ಸುರಕ್ಷತೆ ದೃಷ್ಟಿಯಿಂದ ಕಾಣಿಸಿಕೊಳ್ಳುತ್ತವೆ.
ಇನ್ನು, ಇ-ಮೇಲ್ ಐಡಿ ಅಪ್ ಡೇಟ್ ಮಾಡಬೇಕಿದ್ದಲ್ಲಿ ಮೇಲಿನಂತೆಯೇ ಮೈ ಅಕೌಂಟ್ಸ್ ವಿಭಾಗದಲ್ಲಿ ಖಾತೆಯನ್ನು ಆಯ್ಕೆ ಮಾಡಿಕೊಂಡ ಬಳಿಕ ಇ-ಮೇಲ್ ಐಡಿಯ ಬಾಕ್ಸ್ನಲ್ಲಿ ಹೊಸ ಅಥವಾ ಬಳಕೆಯಲ್ಲಿರುವ ಇ-ಮೇಲ್ ಐಡಿ ದಾಖಲಿಸಿರಿ. ಈ ವೇಳೆ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ’ಒಟಿಪಿ’ ಯನ್ನು ಕಳುಹಿಸಲಾಗುವುದು. ಇದನ್ನು ವೆಬ್ಸೈಟ್ನಲ್ಲಿ ನಮೂದಿಸುವ ಮೂಲಕ ಇ-ಮೇಲ್ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಬಹುದು.