
5 ಸಾವಿರಕ್ಕೂ ಹೆಚ್ಚು ಎಸ್‍ಬಿಐ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಬೇಕಾಗಿರುವ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ https://bank.sbi/careers ಅಥವಾ https://www.sbi.co.in/careers – Recruitment of Junior Associates 2022 ವೀಕ್ಷಿಸಬಹುದು.
ಅಕ್ಟೋಬರ್ ನಲ್ಲಿ ನಡೆಯುವ 6900 ಕ್ಕೂ ಹೆಚ್ಚು ಐಬಿಪಿಎಸ್ ಪ್ರೊಬೇಶನರಿ ಆಫೀಸರ್ ಹುದ್ದೆಗಳ ನೇಮಕ ಪರೀಕ್ಷೆಗೆ ಮತ್ತು ನವೆಂಬರ್ ನಲ್ಲಿ ನಡೆಯುವ 5000 ಕ್ಕೂ ಹೆಚ್ಚು ಎಸ್‍ಬಿಐ ಕ್ಲೆರಿಕಲ್ ಹುದ್ದೆಗಳ ನೇಮಕ ಪರೀಕ್ಷೆಗೆ ಹಾಗೂ ಮುಂಬರುವ ಎಲ್ಲಾ ಬ್ಯಾಂಕ್ ಮತ್ತು ವಿಮಾ ಕಂಪನಿಗಳ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ಕೃಷಿಕ್ ಸರ್ವೋದಯ ಫೌಂಡೇಶನ್(ರಿ) ಹಾಸನ ಶಾಖೆಯಲ್ಲಿ ಸೆಪ್ಟೆಂಬರ್ 19 ರಿಂದ ನುರಿತ ವಿಷಯ ತಜ್ಞರಿಂದ ತರಬೇತಿ ಪ್ರಾರಂಭಿಸಲಾಗುವುದು.
. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯವಶ್ಯಕವಿರುವ ಸಾರ್ಟ್‍ಕಟ್ ಟೆಕ್ನಿಕ್ಸ್ ಮತ್ತು ಸ್ಪೀಡ್ ಮೆಥಾಮೆಟಿಕ್ಸ್ ಕಲಿಕೆಯ ಮೂಲಕ ಟೈಮ್ ಮ್ಯಾನೇಜ್‍ಮೆಂಟ್ ತಂತ್ರಗಾರಿಕೆಯಿಂದ ಅತೀ ಸರಳವಾಗಿ ತರಬೇತಿ ನೀಡಲಾಗುತ್ತದೆ. ಆಸಕ್ತರು ಸೆಪ್ಟೆಂಬರ್, 18 ರೊಳಗೆ 8660217739 ಅಥವಾ 08172-245135 ಕ್ಕೆ ಕರೆ/ ವಾಟ್ಸಾಪ್ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‍ನ ಕಾರ್ಯದರ್ಶಿ ತಿಳಿಸಿದ್ದಾರೆ.