ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11 ವಿಶೇಷ ಕ್ಯಾಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್ (sbi.co.in) ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಮೇ 4 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ:
ಉಪಾಧ್ಯಕ್ಷ ಹಾಗೂ ಮುಖ್ಯಸ್ಥರು (ಸಂಪರ್ಕ ಕೇಂದ್ರ ಪರಿವರ್ತನೆ): 1 ಹುದ್ದೆ
ಹಿರಿಯ ವಿಶೇಷ ಕಾರ್ಯನಿರ್ವಾಹಕ ಪ್ರೋಗ್ರಾಂ ವ್ಯವಸ್ಥಾಪಕ (ಸಂಪರ್ಕ ಕೇಂದ್ರ): 04 ಹುದ್ದೆಗಳು
ಹಿರಿಯ ವಿಶೇಷ ಕಾರ್ಯನಿರ್ವಾಹಕರು, ಗ್ರಾಹಕರ ಅನುಭವಗಳು, ತರಬೇತಿ: 02 ಹುದ್ದೆಗಳು
ಹಿರಿಯ ವಿಶೇಷ ಕಾರ್ಯನಿರ್ವಾಹಕ ಕಮಾಂಡ್ ಕೇಂದ್ರ ವ್ಯವಸ್ಥಾಪಕರು: 03 ಹುದ್ದೆಗಳು
ಹಿರಿಯ ವಿಶೇಷ ಕಾರ್ಯನಿರ್ವಾಹಕ- ಡಯಲರ್ ಆಪರೇಷನ್ಸ್: 01 ಹುದ್ದೆ
ಮನೆಯಲ್ಲೇ ಮಾಡಿ ಸಿಹಿ ಸಿಹಿ ರಸಗುಲ್ಲ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಮತ್ತು ಮಾಹಿತಿ ಶುಲ್ಕವಾಗಿ 750 ರೂ.ಗಳನ್ನು ಪಾವತಿಸಬೇಕು. ಇದನ್ನು ಮರು ಪಾವತಿಸುವುದಿಲ್ಲ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಶುಲ್ಕ ಮನ್ನಾ ಮಾಡಲಾಗಿದೆ.