ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೊಂದು ಖುಷಿ ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 606 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್ಬಿಐ ಕಾರ್ಯನಿರ್ವಾಹಕ, ಐಎಸ್ಬಿಒ, ಎಸ್ಸಿಒ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ.
ಅರ್ಹ ಅಭ್ಯರ್ಥಿಗಳು SBI sbi.co.inನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಎಸ್ಬಿಐ ನೇಮಕಾತಿಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆಯು ಇಂದಿನಿಂದ ಆರಂಭವಾಗಿದ್ದು ಅಕ್ಟೋಬರ್ 18, 2021 ರವರೆಗೆ ಇರಲಿದೆ.
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ-28-09-2021
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ-18-10-2021
ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ – 606
ಹುದ್ದೆ ಹೆಸರು : ಕಾರ್ಯನಿರ್ವಾಹಕ (ಡಾಕ್ಯುಮೆಂಟ್ ಪ್ರೊಟೆಕ್ಷನ್-ಆರ್ಕೈವ್ಸ್) : 1
ರಿಲೇಷನ್ಶಿಪ್ ಮ್ಯಾನೇಜರ್: 314 ಹುದ್ದೆ
ರಿಲೇಷನ್ಶಿಪ್ ಮ್ಯಾನೇಜರ್ (ಟೀಮ್ ಲೀಡ್) : 20 ಹುದ್ದೆಗಳು
ಗ್ರಾಹಕ ಬೆಂಬಲ ಕಾರ್ಯನಿರ್ವಾಹಕ : 217 ಹುದ್ದೆಗಳು
ಹೂಡಿಕೆ ಅಧಿಕಾರಿ : 12 ಹುದ್ದೆಗಳು
ಕೇಂದ್ರ ಸಂಶೋಧನಾ ತಂಡ (ಉತ್ಪನ್ನ) : 2 ಹುದ್ದೆಗಳು
ಕೇಂದ್ರ ಸಂಶೋಧನಾ ತಂಡ (ಸಪೋರ್ಟ್) : 2 ಹುದ್ದೆಗಳು
ಮ್ಯಾನೇಜರ್ (ಮಾರ್ಕೆಟಿಂಗ್) : 12 ಹುದ್ದೆಗಳು
ಉಪ ವ್ಯವಸ್ಥಾಪಕರು (ಮಾರ್ಕೆಟಿಂಗ್) : 26 ಹುದ್ದೆಗಳು
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಭಿನ್ನವಾಗಿವೆ. ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿ ಪಡೆಯಬಹುದು.