ಚಿನ್ನದ ಮೇಲೆ ಗೃಹ ಸಾಲ ಕೊಡಲು ಎಸ್.ಬಿ.ಐ. ಹೊಸ ಸ್ಕೀಂ 17-11-2021 8:47AM IST / No Comments / Posted In: Business, Latest News, Live News ಗೃಹ ನಿರ್ಮಾಣದ ಖರ್ಚಿಗೆ ನೆರವಾಗಲು ಮುಂದಾಗಿರುವ ಸ್ಟೇಟ್ ಬ್ಯಾಂಕ್, ಇದೀಗ ರಿಯಾಲ್ಟಿ ಚಿನ್ನದ ಸಾಲದ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೆಸರೇ ಸೂಚಿಸುವಂತೆ ಚಿನ್ನದ ಆಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುವ ಸ್ಕೀಂ ಇದಾಗಿದೆ. “ಎಸ್‌ಬಿಐನ ರಿಯಾಲ್ಟಿ ಚಿನ್ನದ ಯೋಜನೆಯಿಂದಾಗಿ ನೀವೀಗ ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಅಗತ್ಯವಾದ ಸಾಲವನ್ನು ಯಾವುದೇ ತಲೆನೋವುಗಳಿಲ್ಲದೇ ತ್ವರಿತವಾಗಿ ಪಡೆಯಬಹುದಾಗಿದೆ,” ಎಂದು ಎಸ್‌ಬಿಐ ಟ್ವಿಟರ್‌ನಲ್ಲಿರುವ ತನ್ನ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ. ಜೀವನದಲ್ಲಿ ಪ್ರೀತಿ ದುಪ್ಪಟ್ಟು ಮಾಡುತ್ತೆ ʼಫೆಂಗ್ ಶುಯಿʼ ಉಪಾಯ ಕನಿಷ್ಠ 50,000 ರೂ.ಗಳಿಂದ 50 ಲಕ್ಷ ರೂ.ಗಳವರೆಗೂ ಸಾಲದ ವ್ಯಾಪ್ತಿ ಇದೆ. ಎಸ್‌ಬಿಐ ರಿಯಾಲ್ಟಿ ಚಿನ್ನದ ಲೋನ್ ಮೇಲೆ 25% ಮಾರ್ಜಿನ್ ಇದ್ದು, ರಿಯಾಲ್ಟಿ ಲಿಕ್ವಿಡ್ ಚಿನ್ನದ ಸಾಲದ (ಓಡಿ) ಮೇಲೆ 25% ಹಾಗೂ ಎಸ್‌ಬಿಐ ರಿಯಾಲ್ಟಿ ಮರುಪಾವತಿ ಚಿನ್ನದ ಸಾಲದ ಮೇಲೆ 35%ನಷ್ಟು ಮಾರ್ಜಿನ್ ಇದೆ. ಸಾಲದ ಮೊತ್ತದ 0.5%ನಷ್ಟು ಪರಿಷ್ಕರಣಾ ಶುಲ್ಕವಿದ್ದು, ವಾರ್ಷಿಕ 7.30%ಯಷ್ಟು ಬಡ್ಡಿದರ ಅನ್ವಯವಾಗಲಿದೆ. ಕೋವಿಡ್ ವಾರಿಯರ್‌ಗಳಿಗೆ ಬುಲೆಟ್ ಮರುಪಾವತಿಯ ಮೇಲೆ 7% ಬಡ್ಡಿ ಇರಲಿದೆ. ಸಾಲಗಾರರ ವಯಸ್ಸು 18 ವರ್ಷ ದಾಟಿರಬೇಕು. With SBI's Realty Gold Loan scheme, get quick & hassle-free loan to meet the shortfall in financing your dream home. To know more, visit https://t.co/s6wBOF9Job #SBI #GoldLoan #RealtyGoldLoan #HomeLoan #Loan #DreamHome pic.twitter.com/uuBN4ZrPyb — State Bank of India (@TheOfficialSBI) November 9, 2021