ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಬ್ಯಾಂಕ್ ಗ್ರಾಹಕರಿಗಾಗಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲ ನೀಡ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಈ ಸಾಲ ನೀಡ್ತಿದೆ. ಇದಕ್ಕೆ ಬ್ಯಾಂಕ್ ಕೋವಿಡ್ ವೈಯಕ್ತಿಕ ಸಾಲವೆಂದು ಹೆಸರಿಟ್ಟಿದೆ.
ಈ ಸಾಲದ ವಿಶೇಷವೆಂದ್ರೆ ಇದಕ್ಕಾಗಿ ನೀವು ಯಾವುದೇ ರೀತಿಯ ಭದ್ರತೆ ನೀಡುವ ಅಗತ್ಯವಿಲ್ಲ. ಕೊರೊನಾ ಚಿಕಿತ್ಸೆ ಪಡೆಯಲು ಯಾರಿಗೂ ಹಣದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಬ್ಯಾಂಕ್ ಈ ಸಾಲ ಯೋಜನೆ ಶುರು ಮಾಡಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ, ಕೋವಿಡ್ – 19 ಚಿಕಿತ್ಸೆಗಾಗಿ ಸಂಬಳ ಪಡೆಯುವವರು, ಸಂಬಳ ರಹಿತರು ಮತ್ತು ಪಿಂಚಣಿದಾರರು 25 ಸಾವಿರ ರೂಪಾಯಿಗಳಿಂದ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು.
ಈ ಸಾಲ ಮರುಪಾವತಿಸಲು ಬ್ಯಾಂಕ್ 5 ವರ್ಷದವರೆಗೆ ಅವಕಾಶ ನೀಡ್ತಿದೆ. ಈ ಸಾಲದ ಮೇಲೆ ಬ್ಯಾಂಕ್ ಶೇಕಡಾ 8.5ರಷ್ಟು ಬಡ್ಡಿ ವಿಧಿಸುತ್ತದೆ. ಆಸ್ಪತ್ರೆ ಬಿಲ್ ತೋರಿಸಿ ಈ ಸಾಲವನ್ನು ಪಡೆಯಬಹುದು.