ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಗ್ರಾಹಕರಿಗಾಗಿ ಬ್ಯಾಂಕ್ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಕೊರೊನಾ ಬಿಕ್ಕಟ್ಟಿನ ವೇಳೆ ಗ್ರಾಹಕರಿಗೆ ಬ್ಯಾಂಕ್ ಮನೆ ಬಾಗಿಲಿನ ಬ್ಯಾಂಕಿಂಗ್ ಸೌಲಭ್ಯವನ್ನು ಆರಂಭಿಸಿದೆ. ಈ ಸೌಲಭ್ಯದಲ್ಲಿ ನಗದು ಹಿಂಪಡೆಯುವಿಕೆಯಿಂದ ಹಿಡಿದು ಚೆಕ್‌ಬುಕ್, ಚೆಕ್ ಬುಕ್ ಗೆ ವಿನಂತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಬ್ಯಾಂಕ್ ನಲ್ಲಿ ನಿಯಮಿತ ಬ್ಯಾಲೆನ್ಸ್ ಹೊಂದಿರುವ ಗ್ರಾಹಕರು, ಮನೆ ಬಾಗಿಲಿನಲ್ಲೇ ಬ್ಯಾಂಕಿಂಗ್ ಸೇವೆ ಪಡೆಯಬಹುದು. ಹಣ ವಿತ್ ಡ್ರಾ ಕನಿಷ್ಠ ಮಿತಿ 1,000 ರೂಪಾಯಿಯಾಗಿದ್ದು ಗರಿಷ್ಠ ಮಿತಿ 20,000 ರೂಪಾಯಿಯಾಗಿದೆ. ಬ್ಯಾಂಕಿಂಗ್ ಸೇವೆಯ ಲಾಭ ಪಡೆಯಲು, ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಅಧಿಕೃತ ಲಿಂಕ್ https://bank.sbi/dsb ಕ್ಲಿಕ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
ಈ ಸೌಲಭ್ಯವನ್ನು ಜಂಟಿ ಖಾತೆ, ಸಣ್ಣ ಖಾತೆ, ವೈಯಕ್ತಿಕವಲ್ಲದ ಖಾತೆಗಳಿಗೆ ನೀಡಲಾಗುವುದಿಲ್ಲ. ಗ್ರಾಹಕರ ನೋಂದಾಯಿತ ವಿಳಾಸವು ಗೃಹ ಶಾಖೆಯಿಂದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿರಬೇಕು.
ಮನೆಬಾಗಿಲಿನ ಬ್ಯಾಂಕಿಂಗ್‌ನಲ್ಲಿ ಹಣಕಾಸು ಮತ್ತು ಹಣಕಾಸೇತರ ಸೇವೆಗಳಿಗಾಗಿ 75 ರೂಪಾಯಿ ಜೊತೆ ಜಿಎಸ್‌ಟಿ ವಿಧಿಸಬೇಕಾಗುತ್ತದೆ. ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ಕಾಲ್ ಸೆಂಟರ್ ಮೂಲಕ ಕೂಡ ಹೆಸರು ನೋಂದಾಯಿಸಿಕೊಳ್ಳಬಹುದು.