ದೇಶದಲ್ಲೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನಲ್ಲಿ 2,056 ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಪೈಕಿ ಸಾಮಾನ್ಯ ವರ್ಗಕ್ಕೆ 810, ಆರ್ಥಿಕವಾಗಿ ಹಿಂದುಳಿದವರಿಗೆ 200, ಒಬಿಸಿಗೆ 560, ಎಸ್.ಸಿ.ಗೆ 324, ಎಸ್‌ಟಿ ಅಭ್ಯರ್ಥಿಗಳಿಗೆ 162 ಹುದ್ದೆಗಳು ಖಾಲಿ ಇವೆ.
ಅ. 25ರವರೆಗೆ https://sbi.co.in/ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿಗಳ ಮಾರ್ಪಾಡಿಗೂ ಸಮಯ ನೀಡಲಾಗಿದೆ. ಮೊದಲು ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
SHOCKING: ರೈಲ್ ನಲ್ಲೇ ಮಹಿಳೆ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ, ಒಳ ಉಡುಪು ಹೊರಗೆಳೆದ NCB ಅಧಿಕಾರಿ ಅರೆಸ್ಟ್
ಅಧಿಕಾರಿ ಹುದ್ದೆಗೆ ಅರ್ಹತೆಯಾಗಿ, ಅಭ್ಯರ್ಥಿಗಳು ಯಾವುದೇ ಪದವಿ ಗಳಿಸಿರಬೇಕು. ಇಲ್ಲವೇ ಕೇಂದ್ರ ಸರ್ಕಾರದಿಂದ ತತ್ಸಮಾನ ಅರ್ಹತೆಯ ಸೇವೆಯಲ್ಲಿರಬೇಕು. ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಓದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಪ್ರಿಲಿಮ್ಸ್ ಮೇನ್ ಪರೀಕ್ಷೆ ಮೊದಲು ನಡೆಸಲಾಗುವುದು. ಅದರಲ್ಲಿ ಆಯ್ಕೆಯಾದವರಿಗೆ ಗ್ರೂಪ್ ಚರ್ಚೆ ಅಥವಾ ಸಮೂಹ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಕೊನೆಯದಾಗಿ ಅಂತಿಮ ಪಟ್ಟಿ ಸಿದ್ಧಪಡಿಸಲು ಸಂದರ್ಶನ ನಡೆಸಲಾಗುವುದು ಎಂದು ಆಯ್ಕೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.