alex Certify ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆಂದು ಸುರಕ್ಷಿತ ಬ್ಯಾಂಕಿಂಗ್ ಅನುಭವ ನೀಡುವ ಉದ್ದೇಶದಿಂದ ಕೆಲವೊಂದು ಫೀಚರ್‌ ಗಳನ್ನು ತನ್ನ ಎಟಿಎಂನಲ್ಲಿ ಅಳವಡಿಸಿದೆ.

ಎಟಿಎಂನಲ್ಲಿ ನಗದು ಹಿಂಪಡೆಯುವ ಸಂದರ್ಭದಲ್ಲಿ ಓಟಿಪಿ ಆಧರಿತ ಅಥೆಂಟಿಕೇಶನ್‌ ಅನ್ನು ಪರಿಚಯಿಸಿದೆ. ಇದರಿಂದಾಗಿ ವಂಚಕರು ಎಟಿಎಂನಿಂದ ಅಕ್ರಮ ವ್ಯವಹಾರಗಳಿಗೆ ಅವಕಾಶ ಇಲ್ಲದಂತಾಗುತ್ತದೆ.

‘ಜಿಯೋ’ ಗ್ರಾಹಕರಿಗೆ ಗುಡ್ ನ್ಯೂಸ್: ಜಿಯೋ ಫೋನ್ ನೆಕ್ಸ್ಟ್ ಗೆ ಪ್ರಗತಿ ಒಎಸ್ – ದೀಪಾವಳಿಗೆ ಬಿಡುಗಡೆ ಸಾಧ್ಯತೆ

“ನಮ್ಮ ಓಟಿಪಿ ಆಧರಿತ ನಗದು ಹಿಂಪಡೆತದ ವ್ಯವಸ್ಥೆಯು ವಂಚಕರ ವಿರುದ್ಧ ಲಸಿಕೆ ಇದ್ದಂತೆ. ವಂಚನೆಗಳಿಂದ ನಿಮ್ಮನ್ನು ರಕ್ಷಿಸುವುದು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರಲಿದೆ,” ಎಂದು ಎಸ್‌.ಬಿ.ಐ ಟ್ವೀಟ್ ಒಂದರ ಮೂಲಕ ತಿಳಿಸಿದೆ.

ಎಟಿಎಂ ವಂಚನೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲೆಂದು 2020 ರಲ್ಲಿ ಓಟಿಪಿ ಆಧರಿತ ವ್ಯವಹಾರಗಳನ್ನು ಪರಿಚಯಿಸಲಾಗಿತ್ತು. ಈ ಮೂಲಕ ತನ್ನ ಎಟಿಎಂಗಳಲ್ಲಿ ನಗದು ಹಿಂಪಡೆತಕ್ಕೆ ಮತ್ತೊಂದು ಹಂತದ ಭದ್ರತೆಯ ವ್ಯವಸ್ಥೆಯನ್ನು ಎಸ್‌.ಬಿ.ಐ ಮಾಡಿದೆ.

ಕೃಷಿ, ವಾಹನ, ಗೃಹ, ಇತರೆ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಎಲ್ಲಾ ಬ್ಯಾಂಕ್ ಗಳಿಂದ ಬೃಹತ್ ಸಾಲ ಸಂಪರ್ಕ ಮೇಳ

ಗ್ರಾಹಕರು ಬ್ಯಾಂಕ್‌ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಓಪಿಪಿ ಬರಲಿದೆ. ಹೀಗೆ ಬಂದ ಓಟಿಪಿಯನ್ನು ಎಟಿಎಂನಲ್ಲಿ ನಗದು ಹಿಂಪಡೆಯುವ ಸಂದರ್ಭದಲ್ಲಿ ನಮೂದಿಸಿ ಹಣ ಹಿಂಪಡೆಯಬಹುದಾಗಿದೆ.

ಈ ವ್ಯವಸ್ಥೆಯಿಂದ ಫೇಕ್ ಎಟಿ‌ಎಂ ಕಾರ್ಡ್ ಅವ್ಯವಹಾರಕ್ಕೆ ಕಡಿವಾಣ ಬೀಳಬಹುದೆಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...