ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಬ್ಯಾಂಕ್ ಮಹತ್ವದ ಮಾಹಿತಿಯನ್ನು ಗ್ರಾಹಕರ ಜೊತೆ ಹಂಚಿಕೊಂಡಿದೆ. ಬ್ಯಾಂಕಿನ ವಿಶೇಷ ಸೇವೆ ನಾಳೆಯಿಂದ ಮೂರು ದಿನಗಳವರೆಗೆ ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 44 ಕೋಟಿ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಟ್ವೀಟ್ ಮಾಡಿರುವ ಬ್ಯಾಂಕ್, ಸಿಸ್ಟಂ ನಿರ್ವಹಣೆಗಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಬ್ಯಾಂಕ್ ನಿಗದಿಪಡಿಸಿದ ಸಮಯದಲ್ಲಿ ಯಾವುದೇ ಹಣಕಾಸಿನ ವಹಿವಾಟು ನಡೆಯುವುದಿಲ್ಲ.
ಅಕ್ಟೋಬರ್ 09, 10 ಮತ್ತು 11 ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯೋನೊ ಲೈಟ್ ಮತ್ತು ಯುಪಿಐ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಅಕ್ಟೋಬರ್ 9 ರ ರಾತ್ರಿ 12.20 ರಿಂದ 2.20 ರವರೆಗೆ ಸೇವೆ ಸ್ಥಗಿತಗೊಳ್ಳಲಿದೆ. ಅಕ್ಟೋಬರ್ 10 ಮತ್ತು 11 ರಂದು ರಾತ್ರಿ 11.20 ರಿಂದ 1.20 ರವರೆಗೆ ಸೇವೆ ಲಭ್ಯವಿರುವುದಿಲ್ಲ.
https://twitter.com/TheOfficialSBI/status/1446078719622217735