ದ್ವಿಚಕ್ರ ವಾಹನಗಳ ಖರೀದಿ ಮಾಡುವವರಿಗೆ ಆಕರ್ಷಕ ಸಾಲದ ಆಫರ್ ಕೊಟ್ಟಿರುವ ಸ್ಟೇಟ್ ಬ್ಯಾಂಕ್, ಕಡಿಮೆ ಬಡ್ಡಿ ದರದಲ್ಲಿ, ಸುಲಭವಾದ ಮಾಸಿಕ ಕಂತಿನಲ್ಲಿ ಸಾಲ ನೀಡಲು ಮುಂದಾಗಿದೆ.
ಸಾಲದ ಪ್ರತಿ 10,000 ರೂ.ಗಳಿಗೆ 256ರೂ.ಗಳ ಮಾಸಿಕ ಕಂತಿನಂತೆ ಕೊಡಲಾಗುವ ಈ ಸಾಲದ ಅರ್ಜಿ ಸಲ್ಲಿಕೆಯನ್ನು ಬಹಳ ಸರಳಗೊಳಿಸಿದೆ ಎಸ್.ಬಿ.ಐ.
ಬೈಕ್ ಅಥವಾ ಸ್ಕೂಟರ್ ಖರೀದಿ ಮಾಡಲು ಬಯಸುವವರು ಎಸ್.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
“ನಿಮ್ಮ ಕನಸಿನ ರೈಡ್‌ಗೆ ಸಜ್ಜಾಗಿ! ಯೋನೋ ಮೂಲಕ ನಿಮ್ಮ ದ್ವಿಚಕ್ರ ವಾಹನ ಖರೀದಿಗೆ ಎಸ್.ಬಿ.ಐ. ಈಸಿ ರೈಡ್ ಮೂಲಕ ಪೂರ್ವ-ಅನುಮೋದಿತ ಸಾಲ ಪಡೆಯಿರಿ,” ಎಂದು ಎಸ್.ಬಿ.ಐ ಟ್ವೀಟ್ ಮೂಲಕ ತಿಳಿಸಿದೆ.
ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!
“ಎಸ್.ಬಿ.ಐ. ನಲ್ಲಿ ಖಾತೆ ಹೊಂದುವುದು ಈಗ ಇನ್ನಷ್ಟು ಲಾಭದಾಯಕವಾಗಿದೆ! ಈಗ ನೀವು ದ್ವಿಚಕ್ರ ವಾಹನ ಖರೀದಿಗಾಗಿ ಪೂರ್ವಾನುಮೋದಿತ ಸಾಲವನ್ನು 24×7ರಂತೆ ಯಾವಾಗ ಬೇಕಾದರೂ ಎಸ್.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ಕೆಲವೇ ಕ್ಲಿಕ್‌ಗಳಲ್ಲಿ ಪಡೆಯಬಹುದಾಗಿದೆ. ಸದ್ಯಕ್ಕೆ ಈ ಸಾಲವನ್ನು ನಿರ್ದಿಷ್ಟ ಮಾನದಂಡಗಳ ಮೇಲೆ ಆರಿಸಲಾದ ನಿರ್ದಿಷ್ಟ ವರ್ಗದ ಗ್ರಾಹಕರಿಗೆ ಈ ಸಾಲವನ್ನು ನೀಡಲಾಗುತ್ತಿದೆ,” ಎಂದು ಎಸ್.ಬಿ.ಐ. ತಿಳಿಸಿದೆ.
20,000 ರೂ.ಗಳಿಂದ ಮೂರು ಲಕ್ಷ ರೂಪಾಯಿಗಳವರೆಗೂ ದ್ವಿಚಕ್ರ ವಾಹನ ಖರೀದಿಗಾಗಿ ಎಸ್.ಬಿ.ಐ. ಸಾಲದ ಅವಕಾಶಗಳನ್ನು ನೀಡುತ್ತಿದೆ. ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡುವಂತೆ, ಗರಿಷ್ಠ 48 ತಿಂಗಳ ಮಟ್ಟಿಗೆ ಸಾಲ ಪಡೆಯಲು ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ.
ವಾರ್ಷಿಕ 10.5% ದರದಲ್ಲಿ ಎಸ್.ಬಿ.ಐ. ದ್ವಿಚಕ್ರ ವಾಹನಗಳ ಸಾಲ ನೀಡಲಿದೆ. ದ್ವಿಚಕ್ರ ವಾಹನದ ಆನ್‌ರೋಡ್ ಬೆಲೆಯ 85%ನಷ್ಟು ಮೌಲ್ಯವನ್ನು ಆಯ್ದ ಗ್ರಾಹಕರು ಸಾಲದ ರೂಪದಲ್ಲಿ ಪಡೆಯಬಹುದಾಗಿದೆ. ಈ ಸಾಲವನ್ನು ಪಡೆಯಲು ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ.