BIG NEWS: ಈ ಗ್ರಾಹಕರಿಗೆ ಮತ್ತೊಂದು ಉಚಿತ ಸೇವೆ ಘೋಷಿಸಿದ SBI 17-08-2022 1:04PM IST / No Comments / Posted In: Business, Latest News, Live News ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದು, ಈ ಸೇವೆಯನ್ನು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಬಳಸಲಾಗುತ್ತಿತ್ತು. ಈಗ, ಎಸ್ಬಿಐ ತಿಂಗಳಿಗೆ ಮೂರು ಬಾರಿ ವಿಕಲಚೇತನರಿಗೆ ಉಚಿತ ಬ್ಯಾಂಕಿಂಗ್ ಸೇವೆಗಳನ್ನು ಘೋಷಿಸಿದೆ. ಸಾರ್ವಜನಿಕ ವಲಯದ ಈ ಬ್ಯಾಂಕ್ ಇತ್ತೀಚಿನ ಟ್ವೀಟ್ನಲ್ಲಿ ಈ ಕ್ರಮವನ್ನು ಘೋಷಿಸಿದೆ. ʼನಿಮ್ಮ ಮನೆ ಬಾಗಿಲಿಗೆ ಎಸ್ಬಿಐ !!! ಅಂಗವಿಕಲ ಗ್ರಾಹಕರಿಗೆ, ಎಸ್.ಬಿ.ಐ. ತಿಂಗಳಿಗೆ 3 ಬಾರಿ ಉಚಿತ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಗಳಿಗೆ ಸಹಾಯ ಮಾಡಲಾಗುತ್ತದೆʼ ಎಂದು ತಿಳಿಸಲಾಗಿದೆ. ಎಸ್.ಬಿ.ಐ. ಡೋರ್ಸ್ಟೆಪ್ ಬ್ಯಾಂಕಿಂಗ್ ಸೇವೆಗಳು: ನಗದು ಪಿಕಪ್, ನಗದು ವಿತರಣೆ, ಫಾರ್ಮ್ 15ಎಚ್ ಸ್ವೀಕಾರ, ಡ್ರಾಫ್ಟ್ ವಿತರಣೆ, ಅವಧಿ ಠೇವಣಿ ಸಲಹೆ, ಲೈಫ್ ಸರ್ಟಿಫಿಕೇಟ್ ಸ್ವೀಕಾರ, ಕೆವೈಸಿ ದಾಖಲೆಗಳ ಸ್ವೀಕಾರ ಸೇವೆ ಇದು ಒಳಗೊಂಡಿದೆ. ಗ್ರಾಹಕರು ಎಸ್.ಬಿ.ಐ. ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳಿಗೆ ನೋಂದಾಯಿಸಲು ಟೋಲ್ ಸಂಖ್ಯೆ 1800 1037188 ಅಥವಾ 1800 1213 721 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು. SBI at your doorstep!!! For differently abled customers, SBI is here to help with free “Door Step Banking Services” 3 times in a month. Know more – https://t.co/m4Od9LofF6#SBI #DoorstepBanking #AmritMahotsav pic.twitter.com/tgDFwNlBnb — State Bank of India (@TheOfficialSBI) August 15, 2022