ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈಗ ಎಸ್‌ಬಿಐ ತನ್ನ ಗ್ರಾಹಕರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅವಕಾಶ ನೀಡುತ್ತಿದೆ. ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ತೆರಿಗೆದಾರರು ಯೋನೊ ಅಪ್ಲಿಕೇಶನ್‌ನಲ್ಲಿ ಟ್ಯಾಕ್ಸ್ 2 ವಿನ್ ಸಹಾಯದಿಂದ ತಮ್ಮ ಆದಾಯವನ್ನು ಉಚಿತವಾಗಿ ಸಲ್ಲಿಸಬಹುದು ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. ಸಿಎ ಸೇವೆಯನ್ನು ಸಹ ತೆಗೆದುಕೊಳ್ಳಬಹುದು. ಈ ಸೇವೆಗಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಈ ಸೇವೆ 199 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ಸಿಎ ಕನಿಷ್ಠ ಶುಲ್ಕ 549 ರೂಪಾಯಿ. ಶನಿವಾರ ಮಾತ್ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 199 ರೂಪಾಯಿ ರಿಯಾಯಿತಿ ನೀಡ್ತಿದೆ. ಇದಕ್ಕಾಗಿ ಗ್ರಾಹಕರು ಮೊದಲು ಯೋನೋ ಅಪ್ಲಿಕೇಷನ್ ಗೆ ಲಾಗಿನ್ ಆಗ್ಬೇಕು. ಟ್ಯಾಕ್ಸ್ ಆಂಡ್ ಇನ್ವೆಸ್ಟ್ಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಟ್ಯಾಕ್ಸ್ 2 ವಿನ್ ಕಾಣಿಸುತ್ತದೆ. ಟ್ಯಾಕ್ಸ್ 2 ವಿನ್ ತೆರಿಗೆದಾರರಿಗೆ ಇ-ಫೈಲಿಂಗ್ ವೇದಿಕೆಯಾಗಿದ್ದು, ಅದ್ರ ಸಹಾಯದಿಂದ ತೆರಿಗೆ ರಿಟರ್ನ್ ಸಲ್ಲಿಸಬಹುದು.
ಎಸ್‌ಬಿಐ ಟ್ಯಾಕ್ಸ್ ಟು ವಿನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಸೌಲಭ್ಯವನ್ನು ಬ್ಯಾಂಕಿನ ಯೋನೊ ಆ್ಯಪ್‌ನಲ್ಲಿಯೂ ನೀಡಲಾಗಿದೆ. ಎಸ್‌ಬಿಐ ಯೋನೊ ಅಪ್ಲಿಕೇಷನ್ ಮೊದಲು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.