ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ ಗ್ರಾಹಕರಿಗೆ ಖುಷಿ ಸುದ್ದಿಯಿದೆ. ಎಸ್ಬಿಐ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಉಚಿತ ಲಾಭ ನೀಡ್ತಿದೆ. ರುಪೇ ಡೆಬಿಟ್ ಕಾರ್ಡ್ಗಳನ್ನು ಬಳಸುವ ಎಲ್ಲಾ ಜನ್-ಧನ್ ಖಾತೆದಾರರಿಗೆ 2 ಲಕ್ಷ ರೂಪಾಯಿವರೆಗೆ ಉಚಿತ ಆಕ್ಸಿಡೆಂಟಲ್ ಕವರ್ ನೀಡಲಾಗುತ್ತದೆ.
ಗ್ರಾಹಕರಿಗೆ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ ಅನುಗುಣವಾಗಿ ವಿಮೆಯ ಮೊತ್ತವನ್ನು ಎಸ್ಬಿಐ ನಿರ್ಧರಿಸುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆಯನ್ನು ಆಗಸ್ಟ್ 28, 2018 ರವರೆಗೆ ತೆರೆದಿರುವ ಗ್ರಾಹಕರು ರೂಪೇ ಕಾರ್ಡ್ನಲ್ಲಿ ಒಂದು ಲಕ್ಷದವರೆಗೆ ವಿಮಾ ಮೊತ್ತವನ್ನು ಪಡೆಯುತ್ತಾರೆ. ಆಗಸ್ಟ್ 28, 2018 ರ ನಂತರ ನೀಡಲಾದ ರುಪೇ ಕಾರ್ಡ್ಗಳಲ್ಲಿ 2 ಲಕ್ಷ ರೂಪಾಯಿವರೆಗೆ ಆಕಸ್ಮಿಕ ಕವರ್ ಪ್ರಯೋಜನ ಲಭ್ಯವಿರುತ್ತದೆ.
ಬಡವರಿಗೆ ಅನುಕೂಲವಾಗಲಿ ಎಂದು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಶುರು ಮಾಡಲಾಗಿದೆ. ಬ್ಯಾಂಕ್, ಅಂಚೆ ಕಚೇರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಶೂನ್ಯ ಬ್ಯಾಲೆನ್ಸ್ ನಲ್ಲಿ ಖಾತೆಯನ್ನು ತೆರೆಯಬಹುದು. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಯೋಜನೆಯಡಿ ಯಾವುದೇ ವ್ಯಕ್ತಿ ಆನ್ಲೈನ್ನಲ್ಲಿ ಅಥವಾ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಬ್ಯಾಂಕ್ಗೆ ಭೇಟಿ ನೀಡುವ ಮೂಲಕ ಜನ್ ಧನ್ ಖಾತೆಯನ್ನು ತೆರೆಯಬಹುದು. ಇದಲ್ಲದೆ ಉಳಿತಾಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಖಾತೆಯಾಗಿ ಪರಿವರ್ತಿಸಬಹುದು.
ಅಪಘಾತದ ದಿನಾಂಕದಿಂದ 90 ದಿನಗಳ ಒಳಗಾಗಿ ರುಪೇ ಡೆಬಿಟ್ ಕಾರ್ಡ್ ಅಡಿಯಲ್ಲಿ ಅಪಘಾತ ಮರಣ ವಿಮೆಯ ಪ್ರಯೋಜನವನ್ನು ಪಡೆಯುತ್ತಾರೆ. ವಿಮೆ ಹಣ ಪಡೆಯಲು ಕ್ಲೈಮ್ ಫಾರ್ಮ್ ಭರ್ತಿ ಮಾಡಬೇಕು. ಮರಣ ಪ್ರಮಾಣ ಪತ್ರ ಅಥವಾ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್ಎಸ್ಎಲ್ ವರದಿ ಸಲ್ಲಿಸಬೇಕು.
ಆಧಾರ್ ಕಾರ್ಡ್ ನಕಲು, ರುಪೇ ಕಾರ್ಡ್ ಹೊಂದಿರುವ ಅಫಿಡವಿಟ್ ಸೇರಿದಂತೆ ಅನೇಕ ದಾಖಲೆಗಳನ್ನು ನೀಡಬೇಕಾಗುತ್ತದೆ. 90 ದಿನಗಳಲ್ಲಿ ಎಲ್ಲ ಮಾಹಿತಿ ಸಲ್ಲಿಸಬೇಕು. ಪಾಸ್ಬುಕ್ ಪ್ರತಿಯೊಂದಿಗೆ ನಾಮಿನಿಯ ಹೆಸರು ಮತ್ತು ಬ್ಯಾಂಕ್ ವಿವರಗಳನ್ನು ಸಲ್ಲಿಸಬೇಕು.