
ಎಸ್ ಬಿ ಐ ಗ್ರಾಹಕರಿಗೆ ಖುಷಿ ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿ ಐ ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಲಾಭವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ರುಪೇ ಡೆಬಿಟ್ ಕಾರ್ಡ್ ಬಳಸುವ ಎಲ್ಲ ಜನ್ ಧನ್ ಖಾತೆದಾರರಿಗೆ ಇದ್ರ ಲಾಭ ಸಿಗಲಿದೆ. ಆಕ್ಸಿಡೆಂಟಲ್ ಕವರ್ ಅಡಿಯಲ್ಲಿ ಬ್ಯಾಂಕ್ ಇದನ್ನು ನೀಡಲಿದೆ.
ಗ್ರಾಹಕರು ಜನ್ ಧನ್ ಖಾತೆ ತೆರೆದ ಸಮಯದ ಆಧಾರದ ಮೇಲೆ ಈ ಲಾಭ ಸಿಗಲಿದೆ. ಆಗಸ್ಟ್ 28, 2018ಕ್ಕಿಂತ ಮೊದಲು ಜನ್ ಧನ್ ಖಾತೆ ತೆರೆದ ರುಪೇ ಡೆಬಿಟ್ ಕಾರ್ಟ್ ಬಳಕೆದಾರರಿಗೆ ಒಂದು ಲಕ್ಷ ರೂಪಾಯಿಯವರೆಗೆ ವಿಮೆ ಹಣ ಸಿಗಲಿದೆ. ಇದ್ರ ನಂತ್ರ ರುಪೇ ಕಾರ್ಡ್ ಪಡೆದ ಜನ್ ಧನ್ ಖಾತೆದಾರರಿಗೆ 2 ಲಕ್ಷ ರೂಪಾಯಿವರೆಗೆ ವಿಮೆ ಸೌಲಭ್ಯ ಸಿಗಲಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬಡ ಜನರು ಬ್ಯಾಂಕ್, ಅಂಚೆ ಕಚೇರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಬ್ಯಾಲೆನ್ಸ್ ಗೆ ತೆರೆಯಬಹುದಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯ ಸಿಗಲಿದೆ. ಈ ಯೋಜನೆಯಡಿ ಬ್ಯಾಂಕ್ ಇನ್ನೂ ಅನೇಕ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ.