ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ದ್ವಿಚಕ್ರ ವಾಹನ ಸಾಲ ಯೋಜನೆ ಎಸ್.ಬಿ.ಐ. ಈಸಿ ರೈಡ್ ಪ್ರಾರಂಭಿಸುವುದಾಗಿ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಘೋಷಿಸಿದೆ. ಈ ಯೋಜನೆಯಡಿ ಸಾಲ ಪಡೆಯಬಹುದು.
ಎಸ್.ಬಿ.ಐ. ಯೋನೋ ಅಪ್ಲಿಕೇಶನ್ ಮೂಲಕ ಎಂಡ್-ಟು-ಎಂಡ್ ಡಿಜಿಟಲ್ ಟೂ-ವೀಲರ್ ಲೋನ್ ಪಡೆಯಬಹುದು. ಈ ಯೋಜನೆಯಡಿ, ಗ್ರಾಹಕರು ಗರಿಷ್ಠ 3 ಲಕ್ಷ ರೂಪಾಯಿವರೆಗೆ ದ್ವಿಚಕ್ರ ವಾಹನ ಸಾಲವನ್ನು ಪಡೆಯಬಹುದು. ಗರಿಷ್ಠ 4 ವರ್ಷಗಳ ಅವಧಿಗೆ 3 ಲಕ್ಷ ಸಾಲದ ಮೇಲೆ ಶೇಕಡಾ10.5 ಬಡ್ಡಿ ವಿಧಿಸಲಾಗುತ್ತದೆ. ಕನಿಷ್ಠ ಸಾಲದ ಮೊತ್ತ 20,000 ರೂಪಾಯಿಯಾಗಿದೆ. ಇದ್ರಲ್ಲಿ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸಿಗಲಿದೆ. ಸಾಲದ ಮೊತ್ತವನ್ನು ವಿತರಕರ ಖಾತೆಗೆ ವರ್ಗಾಯಿಸಲಾಗುತ್ತದೆ.
ಎಸ್.ಬಿ.ಐ. ಗ್ರಾಹಕರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಮನೆ ಮನೆಗೆ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿದೆ. ಯೋನೋ ಅಪ್ಲಿಕೇಶನ್ ಮೂಲಕ ಬ್ಯಾಂಕಿಂಗ್ ಸೌಲಭ್ಯವನ್ನು ಮನೆ ಮನೆಗೆ ಒದಗಿಸಲು ಪ್ರಯತ್ನ ಮುಂದುವರೆದಿದೆ ಎಂದು ಎಸ್.ಬಿ.ಐ. ಹೇಳಿದೆ.
ನವೆಂಬರ್ 2017 ರಲ್ಲಿ ಪ್ರಾರಂಭವಾದ ಯೋನೋ ಅಪ್ಲಿಕೇಶನ್ ಸೇವೆ ಪ್ರಾರಂಭವಾಗಿತ್ತು. ಈವರೆಗೆ ಅಪ್ಲಿಕೇಷನ್ 89 ಮಿಲಿಯನ್ ಡೌನ್‌ಲೋಡ್ ಆಗಿದೆ. 42 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ.