
ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ, ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ಪ್ರಮುಖ ಬದಲಾವಣೆ ಮಾಡಿದೆ. ಎಸ್‌ಬಿಐನ ಯೊನೊ ಅಪ್ಲಿಕೇಶನ್‌ಗೆ ಲಾಗಿನ್ ಮಾಡುವ ನಿಯಮದಲ್ಲಿ ಬ್ಯಾಂಕ್ ಬದಲಾವಣೆ ಮಾಡಿದೆ. ಬ್ಯಾಂಕ್ ಗೆ ನೋಂದಾಯಿಸಿದ ನಂಬರ್ ನಿಂದಲೇ ಯೋನೋ ಅಪ್ಲಿಕೇಷನ್ ಗೆ ಲಾಗಿನ್ ಆಗಬೇಕೆಂದು ಬ್ಯಾಂಕ್ ಹೇಳಿದೆ.
ಗ್ರಾಹಕರು ಬೇರೆ ಮೊಬೈಲ್ ನಿಂದ ಈ ಅಪ್ಲಿಕೇಷನ್ ಗೆ ಲಾಗಿನ್ ಆಗುವಂತಿಲ್ಲ. ಆನ್ಲೈನ್ ಬ್ಯಾಂಕ್ ವಂಚನೆಯನ್ನು ತಪ್ಪಿಸಲು ಬ್ಯಾಂಕ್ ಈ ಕ್ರಮಕೈಗೊಂಡಿದೆ. ಈ ಹೊಸ ಅಪ್‌ಗ್ರೇಡನ್ನು ಯೋನೊ ಆಪ್‌ನಲ್ಲಿ ಸೇರಿಸಲಾಗಿದೆ. ಇದ್ರಿಂದ ಗ್ರಾಹಕರು ಸುರಕ್ಷಿತ ಬ್ಯಾಂಕಿಂಗ್ ಸೇವೆ ಪಡೆಯಲಿದ್ದಾರೆ.
ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. ಹೊಸ ನೋಂದಣಿಗಾಗಿ, ಗ್ರಾಹಕರು, ಬ್ಯಾಂಕ್ ಗೆ ನೀಡಿದ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕೆಂದು ಹೇಳಲಾಗಿದೆ. ಬೇರೆ ಸಂಖ್ಯೆಯಿಂದ ಲಾಗಿನ್ ಮಾಡಲು ಸಾಧ್ಯವಿಲ್ಲ. ಯೋನೊ ಎಸ್‌ಬಿಐ ತನ್ನ ಭದ್ರತಾ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತಿದೆ.