ದೇಶದ ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್.ಬಿ.ಐ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ತಮ್ಮ ಕೃಷಿ ವೆಚ್ಚಗಳಿಗಾಗಿ ಸಾಲ ಪಡೆಯಬಹುದಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರ ಅಗತ್ಯತೆಗಳ ಅನುಸಾರ ಈ ಸಾಲ ನೀಡಲಾಗುವುದು. ಖಾತೆಯಲ್ಲಿರುವ ಕ್ರೆಡಿಟ್ ಬ್ಯಾಲೆನ್ಸ್ ಮೇಲೆ ಉಳಿತಾಯ ಖಾತೆಯ ಬಡ್ಡಿ ದರ ಜಮೆಯಾಗಲಿದೆ.
ಅವಧಿ: ಐದು ವರ್ಷಗಳು, 10%ನಂತೆ ವಾರ್ಷಿಕ ಮಿತಿಯಲ್ಲಿ ಹೆಚ್ಚಳವಾಗಲಿದೆ.
ಬೆಳೆ ಅವಧಿ ಆಧರಿಸಿ ಸಾಲ ಮರುಪಾವತಿಯ ಅವಧಿ ನಿಗದಿ ಮಾಡಲಾಗುವುದು. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ಮಂದಿಗೆ ಬಡ್ಡಿಯಲ್ಲಿ 3% ನಷ್ಟು ಕಡಿತವಾಗಲಿದೆ.
ಎಲ್ಲಾ ಕೆಸಿಸಿ ಸಾಲದಾರರಿಗೆ ರುಪೇ ಕಾರ್ಡ್ ನೀಡಲಾಗುವುದು. ಜೊತೆಗೆ ಆಕಸ್ಮಿಕ ವಿಮೆಯಡಿ ರುಪೇ ಕಾರ್ಡ್‌ದಾರರಿಗೆ ಕಾರ್ಡ್ ಸಕ್ರಿಯಗೊಂಡ 45 ದಿನಗಳ ಒಳಗೆ ಒಂದು ಲಕ್ಷ ರೂ.ಗಳವರೆಗೂ ವಿಮೆ ಸೌಲಭ್ಯವಿದೆ.
ಎಸ್.ಬಿ.ಐ. ಕ್ರೆಡಿಟ್ ಕಾರ್ಡ್‌ಗೆ ಬೇಕಾದ ದಾಖಲೆಗಳು
ವಿಳಾಸ ಹಾಗೂ ಗುರುತಿನ ಸಾಕ್ಷಿ: ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ (ಯಾವುದಾದರೂ ಒಂದು)
ಕೃಷಿ ಭೂಮಿಯ ದಾಖಲೆಗಳು
ಅರ್ಜಿದಾರರ ಇತ್ತೀಚಿನ ಭಾವಚಿತ್ರ
ಚೆಕ್ ಹಾಕಿದ ನಂತರದ ದಿನದಿಂದ ಅನ್ವಯವಾಗುವಂತೆ ಭದ್ರತೆಯನ್ನು ಒದಗಿಸಲು ಸಾಲ ನೀಡುವ ಬ್ಯಾಂಕುಗಳು ಕೇಳಬಹುದು.
ಎಸ್‌ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಸಿಗುವ ಬಡ್ಡಿ ದರ
ಮೂರು ಲಕ್ಷ ರೂಗಳವರೆಗೆ -7%
ಮೂರು ಲಕ್ಷ ರೂ. ಮೇಲ್ಪಟ್ಟು – ಕಾಲಕಾಲಕ್ಕೆ ಅನ್ವಯವಾಗುವಂತೆ
ಅರ್ಜಿ ಸಲ್ಲಿಸುವುದು ಹೇಗೆ:
https://sbi.co.in/documents/14463/22577/application+form.pdf/24a2171c-9a… ಲಿಂಕ್‌ಗೆ ಭೇಟಿ ನೀಡಿ ಅರ್ಜಿ ಡೌನ್ಲೋಡ್ ಮಾಡಿಕೊಳ್ಳಿ.
ಎಸ್.ಬಿ.ಐ. ಶಾಖೆಗೆ ನೇರವಾಗಿ ಭೇಟಿ ನೀಡಿ ಕೆಸಿಸಿ ಅರ್ಜಿ ಕೇಳಬಹುದು.
ಕೆಸಿಸಿ ಸಾಲಗಾರರು 70 ವರ್ಷ ಒಳಪಟ್ಟವರಾದರೆ ಅವರಿಗೆ ವೈಯಕ್ತಿಯ ಆಕಸ್ಮಿಕ ವಿಮಾ ಯೋಜನೆ ಲಭ್ಯವಿದೆ.