ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಜೂನಿಯರ್ ಅಸೋಸಿಯೇಟ್ ನೇಮಕಾತಿ ನೋಂದಣಿ ಗಡುವು ವಿಸ್ತರಿಸಲಾಗಿದೆ. ನೇಮಕಾತಿ ಅಧಿಸೂಚನೆ ಅನ್ವಯ ಇಂದು ನೋಂದಣಿ ಮುಕ್ತಾಯವಾಗಬೇಕಿದ್ದು, ಮೇ 20 ರವರೆಗೆ ವಿಸ್ತರಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ದಾಖಲೆ ಹಾಜರುಪಡಿಸಲು ತಿಳಿಸಲಾಗಿದೆ. ಡಿಪಿಒಟಿ ಮಾರ್ಗಸೂಚಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಆದಾಯ ಪ್ರಮಾಣ ಪತ್ರ ದಾಖಲೆ ಪರಿಶೀಲನೆ ನಡೆಯಲಿದ್ದು ದಿನಾಂಕವನ್ನು ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ.
ಹಣಕಾಸು ವರ್ಷದ ಆದಾಯ ಪ್ರಮಾಣ ಪತ್ರವನ್ನು ದಾಖಲೆ ಪರಿಶೀಲನೆಯ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಪಡೆದುಕೊಂಡಿರಬೇಕೆಂದು ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. 5000 ಸಾಮಾನ್ಯ ಹುದ್ದೆಗಳು ಮತ್ತು 237 ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಸ್ಥಳೀಯ ಭಾಷೆಯ ಪರೀಕ್ಷೆ ಮೂಲಕ ನೇಮಕಾತಿಗೆ ಅವಕಾಶ ಇರುತ್ತದೆ. ಜೂನ್ 2021 ರಲ್ಲಿ ಪ್ರಾಥಮಿಕ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 1 ರವರೆಗೆ 20 ರಿಂದ 28 ವರ್ಷ ವಯೋಮಿತಿಯ ಪದವೀಧರರು ಹುದ್ದೆಗೆ ಅರ್ಹರಾಗಿರುತ್ತಾರೆ.