ಒಂದೇ ಖಾತೆ ಮೂಲಕ ಸಾಮಾನ್ಯ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಮತ್ತು ಆನ್ಲೈನ್ ವಹಿವಾಟಿನ ಖಾತೆಗಳ ಪ್ರಯೋಜನಗಳನ್ನು ಕೊಡಬಲ್ಲ ಆಯ್ಕೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಪರಿಚಯಿಸಿದೆ.
ಸರಳವಾದ ಕಾಗದರಹಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಈ ಖಾತೆ ಮೂಲಕ ಗ್ರಾಹಕರು ತಮ್ಮ ಶೇರು ಮಾರುಕಟ್ಟೆ ಪಯಣ ಆರಂಭಿಸಬಹುದು. ಡಿಮ್ಯಾಟ್ ಖಾತೆಯ ಮೂಲಕ ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
ಕಾಜಿರಂಗ ಉದ್ಯಾನದಲ್ಲಿ ಕಾಣಿಸಿಕೊಂಡ ಅಪರೂಪದ ಜಿಂಕೆ
ಈ 3-ಇನ್-1 ಖಾತೆ ಮೂಲಕ ಆರಂಭಿಕ ಸಾರ್ವಜನಿಕ ಆಫರ್ಗಳಲ್ಲೂ (ಐಪಿಓ) ಸಹ ಖಾತೆದಾರರು ಹೂಡಿಕೆ ಮಾಡಬಲ್ಲದಾಗಿದೆ. ಹೊಸ ಸೇವೆ ಬಗ್ಗೆ ತಿಳಿದುಕೊಳ್ಳಲು ಇ-ಮಾರ್ಜಿನ್ ಸವಲತ್ತಿನ ಮುಖಾಂತರ ಗ್ರಾಹಕರು 3-ಇನ್-1 ಖಾತಗೆ ಭೇಟಿ ನೀಡಬಹುದು ಎಂದು ಎಸ್ಬಿಐ ತಿಳಿಸಿದೆ.
3-ಇನ್-1 ಖಾತೆಗೆ ಬೇಕಾದ ದಾಖಲೆಗಳು
ಪಾನ್ ಅಥವಾ ಫಾರಂ 60
ಭಾವಚಿತ್ರ
ಪಾಸ್ಪೋರ್ಟ್/ಆಧಾರ್/ಚಾಲನಾ ಪರವಾನಿಗೆ/ಮತದಾರರ ಗುರುತಿನ ಚೀಟಿ/ನರೇಗಾದ ಜಾಬ್ ಕಾರ್ಡ್/ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿತರಿಸಿದ, ವಿಳಾಸ ಮತ್ತು ಹೆಸರುಗಳು ಇರುವ ಪತ್ರ
ರದ್ದಾದ ಒಂದು ಚೆಕ್ ಹಾಳೆ/ಬ್ಯಾಂಕ್ನ ಇತ್ತೀಚಿನ ಸ್ಟೇಟ್ಮೆಂಟ್