ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐನ ಕೆಲವು ಸೇವೆಗಳು ನಾಳೆ 2 ಗಂಟೆಗಳ ಕಾಲ ಬಂದ್ ಇರಲಿದೆ. ಸೆಪ್ಟೆಂಬರ್ 15ರಂದು 2 ಗಂಟೆಗಳ ಕಾಲ ಸೇವೆ ಬಂದ್ ಆಗಲಿದೆ ಎಂದು ಎಸ್ಬಿಐ ಹೇಳಿದೆ.
ಎಸ್ಬಿಐ, ಟ್ವಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ನಿರ್ವಹಣೆಗಾಗಿ ಕೆಲ ಸೇವೆಗಳನ್ನು ಸೆಪ್ಟೆಂಬರ್ 15ರಂದು ಸ್ಥಗಿತಗೊಳಿಸುವುದಾಗಿ ಬ್ಯಾಂಕ್ ಹೇಳಿದೆ. ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯೋನೊ ಲೈಟ್ ಮತ್ತು ಯುಪಿಐ ಸೇವೆ ಸ್ಥಗಿತಗೊಳ್ಳಲಿದೆ. ಸೆಪ್ಟೆಂಬರ್ 15 ರ ರಾತ್ರಿ 12 ರಿಂದ 2 ಗಂಟೆಯವರೆಗೆ ಈ ಸೇವೆಗಳು ಲಭ್ಯವಿರುವುದಿಲ್ಲ ಎಂದು ಎಸ್ಬಿಐ ಟ್ವೀಟ್ ಮಾಡಿದೆ.
ಗ್ರಾಹಕರಿಗೆ ಯಾವುದೇ ಸೇವೆ ಪಡೆಯಲು ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬ್ಯಾಂಕ್ ಮೊದಲೇ ಈ ಬಗ್ಗೆ ಸೂಚನೆ ನೀಡಿದೆ. ಬ್ಯಾಂಕ್, ನಿರ್ವಹಣೆಗಾಗಿ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 04 ರಂದು, ನಿರ್ವಹಣೆ ಕೆಲಸದ ಕಾರಣ, ಎಸ್ಬಿಐ ಯೋನೊ ಸೇವೆಯನ್ನು ಸುಮಾರು 3 ಗಂಟೆಗಳ ಕಾಲ ಬಂದ್ ಮಾಡಿತ್ತು. ಸಾಮಾನ್ಯವಾಗಿ ನಿರ್ವಹಣೆ ಕೆಲಸ ರಾತ್ರಿ ನಡೆಯುವುದ್ರಿಂದ ಗ್ರಾಹಕರು ಅಷ್ಟು ತೊಂದರೆ ಅನುಭವಿಸುವುದಿಲ್ಲ.