ಮುಂಬೈ: ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೆಕಡ 0.1 ರಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ಗೃಹ, ವಾಣಿಜ್ಯ ಸಾಲದ ಮೇಲಿನ ಇಎಂಐ ಕಂತು ಪ್ರಮಾಣ ಸ್ವಲ್ಪ ಏರಿಕೆಯಾಗಲಿದೆ.
ಜೂನ್ 15ರಿಂದಲೇ ಬಡ್ಡಿ ದರ ಹೆಚ್ಚಳ ಜಾರಿಗೆ ಬರಲಿದೆ. ಒಂದು ವರ್ಷದ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರ ಶೇಕಡ 8.65 ರಿಂದ ಶೇಕಡ 8.75 ಕ್ಕೆ, ಎರಡು ವರ್ಷಕ್ಕೆ ಶೇಕಡ 8.75 ರಿಂದ ಶೇಕಡ 8.85ಕ್ಕೆ, ಮೂರು ವರ್ಷದ ಸಾಲಕ್ಕೆ ಶೇ. 8085ರಿಂದ ಶೇ. 8.95ಕ್ಕೆ ಹೆಚ್ಚಾಗಲಿದೆ. ಒಂದು ತಿಂಗಳ ಬಡ್ಡಿ ದರ ಶೇಕಡ 8.20ರಿಂದ ಶೇ. 8.30ಕ್ಕೆ ಏರಿಕೆಯಾಗಲಿದೆ.
ಮುಂದಿನ ದಿನಗಳಲ್ಲಿ ಬಡ್ಡಿದರ ಏರಿಕೆಯಾಗುವುದಿಲ್ಲ, ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಇದರ ಬೆನ್ನಲ್ಲೇ ಎಸ್.ಬಿ.ಐ. ಬಡ್ಡಿ ದರ ಏರಿಕೆ ಮಾಡಿ ಸಾಲಗಾರರಿಗೆ ಶಾಕ್ ನೀಡಿದೆ.