ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ,ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸುವರ್ಣಾವಕಾಶ ನೀಡ್ತಿದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಎಸ್‌ಬಿಐ ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕವನ್ನು ನೀಡುತ್ತಿದೆ. ಎಸ್‌ಬಿಐ ಸ್ವತಃ ಈ ಮಾಹಿತಿಯನ್ನು ನೀಡಿದೆ.
ಎಸ್.ಬಿ.ಐ. ಗೃಹ ಸಾಲದ ಮೇಲೆ ಅತ್ಯಂತ ಆಕರ್ಷಕ ರಿಯಾಯಿತಿ ನೀಡುತ್ತಿದೆ. ಮಹಿಳೆಯರಿಗೆ ಬಡ್ಡಿ ದರದಲ್ಲಿ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿಯ ಲಾಭವನ್ನು ನೀಡಲಾಗುತ್ತಿದೆ. ಯೊನೊ ಸೇವೆ ಅಡಿ, ಗೃಹ ಸಾಲ ಪಡೆಯಲು ಬಯಸಿದರೆ, 5 ಬಿಪಿಎಸ್ ಬಡ್ಡಿ ರಿಯಾಯಿತಿಯ ಲಾಭವನ್ನು ನೀಡುತ್ತಿದೆ.
ಎಸ್.ಬಿ.ಐ. ಗೃಹ ಸಾಲದ ಬಡ್ಡಿ ದರ ಶೇಕಡಾ 6.70ರಷ್ಟಿದೆ. ಎಸ್.ಬಿ.ಐ. ತನ್ನ ಗ್ರಾಹಕರಿಗೆ 30 ಲಕ್ಷದವರೆಗಿನ ಗೃಹ ಸಾಲವನ್ನು ಶೇಕಡಾ 6.70 ರ ಬಡ್ಡಿದರದಲ್ಲಿ ನೀಡುತ್ತಿದೆ. 30 ಲಕ್ಷದಿಂದ 75 ಲಕ್ಷದವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವು ಶೇಕಡಾ 6.95ರಷ್ಟಿದೆ. 75 ಲಕ್ಷಕ್ಕಿಂತ ಹೆಚ್ಚಿನ ಗೃಹ ಸಾಲಗಳ ಬಡ್ಡಿದರವು ಕೇವಲ ಶೇಕಡಾ 7.05 ರಷ್ಟಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಭಿಯಾನದಡಿ ಎಸ್.ಬಿ.ಐ. ಈ ಆಕರ್ಷಕ ಗೃಹ ಸಾಲ ಸೌಲಭ್ಯವನ್ನು ನೀಡ್ತಿದೆ. ಆಕರ್ಷಕ ಗೃಹ ಸಾಲ ಸೌಲಭ್ಯವನ್ನು ಆಗಸ್ಟ್ 15 ರಂದು ಪಡೆಯಬಹುದು. ಎಸ್.ಬಿ.ಐ. ನ ಡಿಜಿಟಲ್ ಸೇವೆ ಯೋನೊ ಎಸ್.ಬಿ.ಐ. ಮೂಲಕ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಎಸ್.ಬಿ.ಐ. 7208933140 ಸಂಖ್ಯೆಯನ್ನು ಗ್ರಾಹಕರಿಗೆ ನೀಡಿದೆ. ಗೃಹ ಸಾಲಕ್ಕಾಗಿ ಗ್ರಾಹಕರು ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು.