ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ ನಿಮ್ಮ ಮನೆಗಳಲ್ಲೇ ಕುಳಿತು ನಿಮ್ಮ ಬ್ಯಾಂಕಿಂಗ್ ಕೆಲಸ ಮಾಡಿಕೊಳ್ಳಲು ಸ್ಟೇಟ್ ಬ್ಯಾಂಕ್ ಹೊಸ ಸವಲತ್ತುಗಳನ್ನು ಹೊರತಂದಿದೆ.
ಎಸ್‌ಬಿಐನ ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗಳು (ಡಿಎಸ್‌ಬಿ) 2018ರಿಂದ ಚಾಲ್ತಿಯಲ್ಲಿದ್ದು, ಆಯ್ದ ಶಾಖೆಗಳ ಖಾತೆದಾರರಿಗೆ ಡಿಎಸ್‌ಬಿ ಸೇವೆಗಳು ಲಭ್ಯವಿರಲಿವೆ. ಈ ಸೇವೆಗಳ ಪಟ್ಟಿ ಇಂತಿದೆ:
ಕ್ಯಾಶ್ ಪಿಕಪ್
ಕ್ಯಾಶ್ ಡೆಲಿವರಿ
ಚೆಕ್ ಪಿಕಪ್
ಚೆಕ್ ಮತ್ತು ವಿನಂತಿಯ ಸ್ಲಿಪ್ ಪಿಕಪ್
ಫಾರಂ 15ಎಚ್ ಪಿಕಪ್
ಡ್ರಾಫ್ಟ್‌ಗಳ ಡೆಲಿವರಿ
ಅವಧಿ ಹೂಡಿಕೆ ಸಲಹೆಗಳ ಡೆಲಿವರಿ
ಜೀವ ಪ್ರಮಾಣಪತ್ರದ ಪಿಕಪ್
ಕೆವೈಸಿ ದಾಖಲೆಗಳ ಪಿಕಪ್
ಮೇಲ್ಕಂಡ ಸೇವೆಗಳು ಡಿಎಸ್‌ಬಿ ಮುಖೇನ 70 ವರ್ಷ ಮೇಲ್ಪಟ್ಟ ನಾಗರಿಕರು ಹಾಗೂ ದೈಹಿಕವಾಗಿ ಅಶಕ್ತರಾದ ಮಂದಿಗೆ ಲಭ್ಯವಿವೆ. ಕೆವೈಸಿ ಪೂರ್ಣಗೊಳಿಸಿದ ಗ್ರಾಹಕರಿಗೆ ಈ ಸೇವೆಗಳು ಸಿಗಲಿದ್ದು, ಖಾತೆಯೊಂದಿಗೆ ಲಗತ್ತಿಸಲಾದ ಮೊಬೈಲ್ ಸಂಖ್ಯೆಯ ಮುಖಾಂತರ ಸಿಗಲಿವೆ.
ತಮ್ಮ ಹೋಂ ಬ್ರಾಂಚ್‌ನ 5ಕಿಮೀ ವ್ಯಾಪ್ತಿಯಲ್ಲಿ ವಿಳಾಸವಿರುವ ಗ್ರಾಹಕರೂ ಸಹ ಈ ಸೇವೆಗಳನ್ನು ಪಡೆಯಬಲ್ಲರು.
ಕ್ಯಾಶ್ ಹಿಂಪಡೆತ ಹಾಗೂ ಠೇವಣಿ ಇಡುವ ಮಿತಿಯನ್ನು 20,000 ರೂ./ದಿನದಂತೆ ನಿಗದಿಪಡಿಸಲಾಗಿದೆ. ಪ್ರತಿಯೊಂದು ಭೇಟಿಗೂ; ಆರ್ಥಿಕವಲ್ಲದ ವ್ಯವಹಾರಕ್ಕೆ 60 ರೂ. + ಜಿಎಸ್‌ಟಿ ಹಾಗೂ ವಿತ್ತೀಯ ವ್ಯವಹಾರಕ್ಕೆ 100 ರೂ. + ಜಿಎಸ್‌ಟಿ ಶುಲ್ಕ ವಿಧಿಸಲಾಗುವುದು. ಚೆಕ್ ಹಾಗೂ ಪಾಸ್‌ಬುಕ್‌ನೊಂದಿಗೆ ಹಿಂಪಡೆತದ ಫಾರಂ ಮೂಲಕ ನಗದು ಹಿಂಪಡೆತಕ್ಕೆ ಅನುಮತಿ ನೀಡಲಾಗಿದೆ.