ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆನ್ಲೈನ್ ಸೇವೆಗಳು ಹೆಚ್ಚುತ್ತಲೇ ಇದೆ. ಇದೀಗ ಎಸ್‌ಬಿಐ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಅವಕಾಶ ತೆರೆದಿಟ್ಟಿದೆ.
ನಾಲ್ಕು ಸ್ಟೆಪ್‌ಗಳ ಮೂಲಕ ಠೇವಣಿ ಬಡ್ಡಿ ದರ ಪ್ರಮಾಣಪತ್ರ ಪಡೆಯುವ ಸುಲಭ, ಸರಳ ಅವಕಾಶವನ್ನು ಬ್ಯಾಂಕ್ ಮಾಡಿಕೊಟ್ಟಿದೆ. ಈ ಮೂಲಕ ಬ್ಯಾಂಕ್ ಶಾಖೆಗೆ ಗ್ರಾಹಕರು ಬರದೇ ಅನೇಕ ಸೇವೆಗಳನ್ನು ಪಡೆದುಕೊಳ್ಳುವ ಅವಕಾಶಗಳನ್ನು ವಿಸ್ತರಿಸಿದೆ.
ಎಸ್‌ಬಿಐ ಈ ವಿಚಾರವಾಗಿ ಟ್ವೀಟ್ ಮಾಡಿದ್ದು, 4 ಕ್ಲಿಕ್ ಮೂಲಕ ಡಿಪಾಸಿಟ್ ಇಂಟರೆಸ್ಟ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿಕೊಂಡಿದೆ.
BIG NEWS: ಸಿಎಂ ಬದಲಾವಣೆಯಾದರೆ ಪಕ್ಷಕ್ಕೆ ತೊಂದರೆ; ಮತ್ತೆ ಎಚ್ಚರಿಕೆ ನೀಡಿದ ಮಠಾಧೀಶರು
– ಎಸ್‌ಬಿಐ ಅಪ್ಲಿಕೇಶನ್ ತೆರೆದು ವಿತೌಟ್ ಲಾಗಿನ್ ಸೆಕ್ಷನ್ ಗೆ ಪ್ರವೇಶಿಸಬೇಕು.
– ಅಕೌಂಟ್ ಸರ್ವಿಸ್ ವಿಭಾಗಕ್ಕೆ ಪ್ರವೇಶ ಮಾಡಬೇಕು.
– ಡಿಪಾಸಿಟ್ ಇಂಟರೆಸ್ಟ್ ಬಟನ್ ಕ್ಲಿಕ್ ಮಾಡುವುದು.
– ಗ್ರಾಹಕರ ವಿವರಣೆ ದಾಖಲಿಸಿ ಪಾಸ್ವರ್ಡ್ ದಾಖಲಿಸುವುದು.
ಗ್ರಾಹಕರು ಆಂಡ್ರಾಯ್ಡ್, ವಿಂಡೋಸ್, ಐಎಎಸ್ ಅಥವಾ ಬ್ಲಾಕ್ಬೆರಿ ಫೋನ್ ಹೊಂದಿದ್ದರೆ ಆಪ್ ಸ್ಟೋರ್ ಮೂಲಕ ಎಸ್‌ಬಿಐ ಕ್ವಿಕ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವುದು. ಹಾಗೆ ಈ ಸೇವೆಯನ್ನು ವೆಬ್ ಸೈಟ್ ಮೂಲಕ ಪಡೆಯಬಹುದು.