ಎಸ್‌ಬಿಐನ ತನ್ನ ಕೋಟ್ಯಂತರ ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ ಜೇಬಿಗೆ ನಾಳೆಯಿಂದ ಕತ್ತರಿ ಬೀಳಲಿದೆ. ಡಿಸೆಂಬರ್ 1ರಿಂದ ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡುವುದು ದುಬಾರಿಯಾಗಲಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಇಎಂಐ ವಹಿವಾಟುಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಎಸ್ಬಿಐ ಈ ಹೊಸ ನಿಯಮ ಕೋಟ್ಯಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಇಎಂಐ ವಹಿವಾಟುಗಳಿಗೆ, ಕಾರ್ಡ್‌ದಾರರು 99 ರೂಪಾಯಿ ಸಂಸ್ಕರಣಾ ಶುಲ್ಕ ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಎಸ್‌ಬಿಐಸಿಪಿಎಸ್‌ಎಲ್, ಘೋಷಿಸಿದೆ. ಹೊಸ ನಿಯಮ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಎಸ್‌ಬಿಐ, ಸಿಪಿಎಸ್‌ಎಲ್ ರಿಟೇಲ್ ಔಟ್‌ಲೆಟ್‌ಗಳು ಮತ್ತು ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾಡಿದ ಎಲ್ಲಾ ಇಎಂಐ ವಹಿವಾಟುಗಳಿಗೆ ಎಸ್ಬಿಐ ಗ್ರಾಹಕರಿಂದ ಪ್ರಕ್ರಿಯೆ ಶುಲ್ಕವನ್ನು ವಸೂಲಿ ಮಾಡುತ್ತದೆ. ಹೊಸ ಶುಲ್ಕದ ಬಗ್ಗೆ ಕಂಪನಿಯು ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ. ಇಎಂಐ ಆಗಿ ಪರಿವರ್ತಿಸಲಾದ ವಹಿವಾಟಿನ ಮೇಲೆ ಸಂಸ್ಕರಣಾ ಶುಲ್ಕಗಳು ಅನ್ವಯಿಸುತ್ತವೆ.
ಆನ್‌ಲೈನ್ ಇಎಂಐ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕ ಪಡೆಯಲಾಗುತ್ತದೆ. ಈ ಬಗ್ಗೆ ಬ್ಯಾಂಕ್ ವೆಬ್ಸೈಟ್ ಮುಖಪುಟದಲ್ಲಿ ಮಾಹಿತಿಯಿದೆ. ಇಎಂಐ ವಹಿವಾಟು ರದ್ದುಗೊಂಡರೆ, ಪ್ರಕ್ರಿಯೆ ಶುಲ್ಕವನ್ನು ಮರು ಪಾವತಿಸಲಾಗುತ್ತದೆ.