
ಕೋಲ್ಕತ್ತಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಟ್ವಿಟರ್ನಲ್ಲಿ ಆಶಿಷ್ ಎಂಬವರು ಶಾಖೆಯಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಎಸ್.ಬಿ.ಐ., ನಿಮ್ಮದೊಂದು ಶಾಖೆಗೆ ನಾನಿಂದು ಚಡ್ಡಿ ಧರಿಸಿ ತೆರಳಿದ್ದೆ. ಆದರೆ ಅಲ್ಲಿ ನನಗೆ ಪ್ಯಾಂಟ್ ಧರಿಸಿ ಶಾಖೆಗೆ ಆಗಮಿಸುವಂತೆ ತಾಕೀತು ಮಾಡಲಾಯ್ತು. ಗ್ರಾಹಕರು ಸಭ್ಯರಂತೆ ಇರಬೇಕು ಎಂದು ಅವರು ಬಯಸುತ್ತಾರಂತೆ. ನಿಮ್ಮಲ್ಲಿ ಗ್ರಾಹಕರು ಇಂತದ್ದೇ ಬಟ್ಟೆ ಧರಿಸಬೇಕು ಎಂಬ ಕಾನೂನು ಇದೆಯೇ ಎಂದು ಪ್ರಶ್ನಿಸಿದ್ದಾರೆ. ರೆಡಿಟ್ ಪೋಸ್ಟ್ನಲ್ಲಿಯೂ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಬ್ಯಾಂಕ್ನ ಸಿಬ್ಬಂದಿಯೆಲ್ಲರೂ ಪ್ಯಾಂಟ್ ಧರಿಸಿ ಬರಬೇಕು ಎಂದು ನನ್ನ ಮೇಲೆ ಮುಗಿಬಿದ್ದರು. ಖಾತೆ ವಿಚಾರವಾಗಿ ಸಹಾಯಕ್ಕೆ ಕ್ಲರ್ಕ್ ಬಳಿ ಕೇಳಿದೆ. ಅವರೂ ಸಹ ನನಗೆ ಸಹಾಯ ಮಾಡಲು ನಿರಾಕರಿಸಿದರು ಎಂದು ಹೇಳಿದ್ದಾರೆ. ಆದರೆ ಈ ಘಟನೆ ಸಂಬಂಧ ಎಸ್.ಬಿ.ಐ. ನಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.