ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರೇ, ಹಾಗಿದ್ರೆ ನಿಮಗೊಂದು ಮಹತ್ವದ ಅಲರ್ಟ್ ಇದೆ. ಪ್ರಸ್ತುತ ಲಕ್ಷಾಂತರ ನಾಗರಿಕರು ಬಳಸುತ್ತಿರುವ ಸೇವೆಗೆ ಶುಲ್ಕ ಪಾವತಿಸುವ ತೀರ್ಮಾನ ಹೊರಬಿದ್ದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ಎಲ್ಲಾ ಇಎಂಐ ವಹಿವಾಟಿಗೆ ಸಂಸ್ಕರಣಾ ಶುಲ್ಕ ಮತ್ತು ತೆರಿಗೆಯನ್ನು ವಿಧಿಸುವುದಾಗಿ ಹೇಳಿದ್ದು, ಹೊಸ ನಿಯಮವು ಡಿಸೆಂಬರ್ 1, 2021 ರಿಂದ ಅನ್ವಯವಾಗುತ್ತದೆ.
ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವಿಸಸ್ ಸಂಸ್ಕರಣಾ ಶುಲ್ಕ 99 ರೂ. ವಿಧಿಸುವುದಾಗಿ ಘೋಷಿಸಿದೆ.
ಮಳಿಗೆಗಳಲ್ಲಿ ಮಾಡಿದ ಎಲ್ಲಾ ಮಾಸಿಕ ಕಂತುಗಳ (ಇಎಂಐ) ವಹಿವಾಟುಗಳ ಮೇಲೆ ಮತ್ತು ಅಮೆಜಾನ್, ಪ್ಲಿಪ್ ಕಾರ್ಟ್ ಮತ್ತು ಮಿಂತ್ರಾ ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮೂಲಕ ಮಾಡಿದ ಇಎಂಐ ಆಧಾರಿತ ವ್ಯವಹಾರಕ್ಕೆ ಈ ಶುಲ್ಕ ಅನ್ವಯ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಇ-ಮೇಲ್ ಮೂಲಕ ಈ ಸೂಚನೆಯನ್ನು ಕಳುಹಿಸಲಾಗಿದೆ.