alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: SBI‌ ನ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: SBI‌ ನ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 1,226 ವೃತ್ತಾಧರಿತ ಅಧಿಕಾರಿಗಳ (ಸಿಬಿಓ) ನೇಮಕಾತಿಗೆ ಚಾಲನೆ ನೀಡಲಾಗಿದೆ. ಈ ಸಂಬಂಧ ಎಸ್‌.ಬಿ.ಐ. ತನ್ನ ಅಧಿಕೃತ ಜಾಲತಾಣದಲ್ಲಿ ನೋಟಿಫಿಕೇಶನ್ ಹೊರಡಿಸಿದೆ – https://bank.sbi/careers.

ಅರ್ಹತಾ ಮಾನದಂಡಗಳು

* ಅಭ್ಯರ್ಥಿಗಳು ಯಾವುದಾದರೂ ಒಂದು ವಿಷಯದಲ್ಲಿ, ಮನ್ನಣೆ ಪಡೆದ ವಿವಿಯಿಂದ ಪದವೀಧರರಾಗಿರಬೇಕು. ಇಲ್ಲ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ತತ್ಸಮಾನ ಅರ್ಹತೆ ಹೊಂದಿರಬೇಕು.

* ರಿಸರ್ವ್ ಬ್ಯಾಂಕ್‌ನ ಎರಡನೇ ಶೆಡ್ಯೂಲ್‌ನಲ್ಲಿರುವ ಯಾವುದಾದರೂ ವಾಣಿಜ್ಯ ಬ್ಯಾಂಕ್‌ ಅಥವಾ ಗ್ರಾಮೀಣ ಬ್ಯಾಂಕ್‌‌ನಲ್ಲಿ ಅಧಿಕಾರಿಯಾಗಿ ಡಿಸೆಂಬರ್‌ 1, 2021ರಂತೆ ಕನಿಷ್ಠ ಎರಡು ವರ್ಷಗಳ ಅನುಭವ (ಶೈಕ್ಷಣಿಕ ಅರ್ಹತೆಯ ಮೇಲೆ) ಹೊಂದಿರಬೇಕು.

* ನಿರ್ದಿಷ್ಟ ರಾಜ್ಯಗಳಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಂದಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಓದಲು, ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರಬೇಕು. ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಸಂಬಂಧಪಟ್ಟ ಸ್ಥಳೀಯ ಭಾಷೆಯ ಜ್ಞಾನವನ್ನು ಪರೀಕ್ಷಿಸಿ ನೋಡಲಾಗುತ್ತದೆ.

BIG NEWS: ಬೆಳಗಾವಿ ಹಿಂಸಾಚಾರ ಪ್ರಕರಣ; 27 ಪುಂಡರಿಗೆ ನ್ಯಾಯಾಂಗ ಬಂಧನ

ವಯೋಮಿತಿ

ಡಿಸೆಂಬರ್‌ 1, 2021ರಂದು ಅಭ್ಯರ್ಥಿಯ ವಯಸ್ಸು 21ಕ್ಕಿಂತ ಕಡಿಮೆ ಹಾಗೂ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 01.12.2000 ಮತ್ತು 02.12.1991ರ ನಡುವೆ ಜನಿಸಿರಬೇಕು. ಇದರಲ್ಲಿ ಕೆಲವೊಂದು ಸಡಿಲಿಕೆಗಳಿದ್ದು, ಇದನ್ನು ತಿಳಿಯಲು — https://bank.sbi/documents/77530/11154687/081221-CBO-21+Final+Detailed+Advt+ENG.pdf/6d3a8188-f5a6-e9dd-98fc-e580796a0766?t=1638963781497 ಲಿಂಕ್ ಕ್ಲಿಕ್ ಮಾಡಿ.

ಒಟ್ಟು ಹುದ್ದೆಗಳು

ಬೆಂಗಳೂರು (ಕನ್ನಡ): 278

ಅಹಮದಾಬಾದ್ (ಗುಜರಾತಿ): 354

ಭೋಪಾಲ್ (ಹಿಂದಿ): 214

ಚೆನ್ನೈ (ತಮಿಳು): 276

ಜೈಪುರ (ಹಿಂದಿ): 104

ಮೂಲ ವೇತನ: ಸುಮಾರು 36,000 ರೂ. ಜೊತೆಗೆ ಸೇವಾವಧಿಯಲ್ಲಿ ಹೆಚ್ಚಳವಾಗುವ ಪ್ರತಿ ವರ್ಷಕ್ಕೊಂದು ಹೆಚ್ಚಳ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್‌ 29, 2021.

ಆಸಕ್ತ ಅಭ್ಯರ್ಥಿಗಳು https://bank.sbi/careers ಲಿಂಕ್‌ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...