ಯಾವುದೇ ಬ್ಯುಸಿನೆಸ್‌ಗೆ ಕೈ ಹಾಕುವುದು ಎಂದರೆ ಅದು ಭಾರೀ ರಿಸ್ಕ್‌ಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಎಂದೂ ಅರ್ಥೈಸಬಹುದಾಗಿದೆ. ಒಂದು ವೇಳೆ ಯಾರಾದರೂ ನಿಮಗೆ ಹೀಗೆ ಹೇಳಿದರೆ ಹೇಗೆ?: ಹಿಂದಿರುಗಿಸಬಹುದಾದ ಮೊತ್ತ ಐದು ಲಕ್ಷ ರೂ. ಗಳನ್ನು ಒಮ್ಮೆ ಪಾವತಿ ಮಾಡುವ ಮೂಲಕ ನೀವು ಪ್ರತಿ ತಿಂಗಳು 60,000-70,000 ರೂ. ಗಳನ್ನು ಸಂಪಾದಿಸಬಹುದಾದರೆ?
ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ, ಪಿಎನ್‌ಬಿ ಹಾಗೂ ಯುಬಿಐನ ಬ್ಯಾಂಕ್-ಬ್ರಾಂಡೆಡ್ ಎಟಿಎಂಗಳನ್ನು ಬ್ಯಾಂಕುಗಳೇ ಅವಳಡಿಸುತ್ತಿವೆ ಎಂದು ನಾವು ಭಾವಿಸಿರುತ್ತೇವೆ. ಆದರೆ ಈ ಬ್ಯಾಂಕುಗಳ ಎಟಿಎಂಗಳ ಅಳವಡಿಕೆಗೆ ಫ್ರಾಂಚೈಸಿ ರೂಪದಲ್ಲಿ ಕಾಂಟ್ರಾಕ್ಟ್ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ.
ಎಟಿಎಂಗಳ ಅಳವಡಿಕೆಗೆಂದು ಬಹುತೇಕ ಬ್ಯಾಂಕುಗಳು ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ, ಇಂಡಿಯಾ ಒಬ್ ಎಟಿಎಂನಂಥ ಏಜೆನ್ಸಿಗಳೊಂದಿಗೆ ಕೈ ಜೋಡಿಸಿರುತ್ತವೆ. ಹಾಗಾಗಿ, ನಿಮಗೆ ಎಟಿಎಂ ಫ್ರಾಂಚೈಸಿ ಬೇಕಾದಲ್ಲಿ ಮೇಲ್ಕಂಡ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸಬೇಕು. ಏಜೆನ್ಸಿಗಳ ಅಧಿಕೃತ ಜಾಲತಾಣಗಳ ಮೂಲಕ ಮಾತ್ರವೇ ಈ ಫ್ರಾಂಚೈಸಿ ಅರ್ಜಿಗಳನ್ನು ಸಲ್ಲಿಸಿ.
ಎಟಿಎಂ ಕ್ಯಾಬಿನ್ ಅಳವಡಿಸಲು ಮೊದಲಿಗೆ 50 ಮತ್ತು 80 ಚದರಡಿಯ ಜಾಗ ನಿಮ್ಮಲ್ಲಿರಬೇಕು. ಇತರೆ ಎಟಿಎಂಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಹಾಗೂ ಜನರ ಕಣ್ಣಿಗೆ ಸುಲಭದಲ್ಲಿ ಬೀಳುವ ಜಾಗದಲ್ಲಿ ಇರಬೇಕು. ಕನಿಷ್ಠ1 ಕಿವ್ಯಾ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಈ ಕ್ಯಾಬಿನ್ ಅಳವಡಿಸಲು ಕಾಂಕ್ರೀಟ್ ಛಾವಣಿ ಇರುವ ಶಾಶ್ವತ ಕಟ್ಟಡ ಇರಬೇಕು. ಒಂದು ವೇಳೆ ನೀವು ಸೊಸೈಟಿಯಲ್ಲಿ ವಾಸಿಸುತ್ತಿದ್ದರೆ ಅಲ್ಲಿಂದ ಎನ್‌ಒಸಿ ಪಡೆಯಬೇಕು.
ಎಟಿಎಂ ಫ್ರಾಂಚೈಸಿ ಪಡೆಯಲು ಕೆಳಕಂಡ ದಾಖಲೆಗಳು ನಿಮ್ಮ ಬಳಿ ಇರಬೇಕು:
– ಗುರುತಿನ ಚೀಟಿ – ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಕಾರ್ಡ್
– ವಿಳಾಸದ ಗುರುತು – ರೇಷನ್ ಕಾರ್ಡ್, ವಿದ್ಯುತ್ ಬಿಲ್
– ಬ್ಯಾಂಕ್ ಖಾತೆ ಹಾಗೂ ಪಾಸ್‌ಬುಕ್
– ಫೋಟೋಗ್ರಾಫ್, ಇ-ಮೇಲ್ ವಿಳಾಸ, ಫೋನ್ ನಂ.
– ಏಜೆನ್ಸಿಗಳು ಬಯಸುವ ಇತರೆ ದಾಖಲೆಗಳು/ಅರ್ಜಿಗಳು
– ಜಿಎಸ್‌ಟಿ ಸಂಖ್ಯೆ
– ಕಂಪನಿ ಕೇಳುವ ಆರ್ಥಿಕ ದಾಖಲೆಗಳು
ಬಹುತೇಕ ಎಟಿಎಂ ಫ್ರಾಂಚೈಸಿ ಪ್ರಕರಣಗಳಲ್ಲಿ, ನೀವು ಎರಡು ಲಕ್ಷ ರೂ.ಗಳನ್ನು ಭದ್ರತಾ ಠೇವಣಿ ಇಟ್ಟು, ಮೂರು ಲಕ್ಷ ರೂ.ಗಳನ್ನು ಕಾರ್ಯಚಟುವಟಿಕೆಯ ಬಂಡವಾಳವನ್ನಾಗಿ ಇಡಲು ಕೋರಲಾಗುತ್ತದೆ. ಒಂದೊಮ್ಮೆ ಹೀಗೆ ಎಟಿಎಂ ಅಳವಡಿಸಿದಲ್ಲಿ, ನಿಮಗೆ ಆ ಎಟಿಎಂ ಮೂಲಕ ಮಾಡುವ ಪ್ರತಿಯೊಂದು ನಗದು ವ್ಯವಹಾರಕ್ಕೂ 8 ರೂ. ಹಾಗೂ ಪ್ರತಿಯೊಂದು ನಗದೇತರ ವ್ಯವಹಾರಕ್ಕೂ 2 ರೂ.ಗಳು ಸಂದಾಯವಾಗುತ್ತವೆ.