ಮಾರ್ಚ್ 31, 2022 ರ ಮೊದಲು ತಮ್ಮ ಪಾನ್ ಕಾರ್ಡ್ ಅನ್ನು ತಮ್ಮ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ದೇಶಾದ್ಯಂತ ತನ್ನ ಕೋಟ್ಯಂತರ ಗ್ರಾಹಕರಿಗೆ ಅಲರ್ಟ್ ಮಾಡಿದೆ.
ಈ ಅಗತ್ಯ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ, ಅಂಥ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪೂರೈಸುವ ವೇಳೆ ಅಡಚಣೆಗಳು ಸಂಭವಿಸುವ ಸಾಧ್ಯತೆಗಳು ಉದ್ಭವಿಸುತ್ತವೆ ಎಂದು ಎಚ್ಚರಿಸಿದೆ ಭಾರತೀಯ ಸ್ಟೇಟ್ ಬ್ಯಾಂಕ್.
ಪತಿಯನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಪತ್ನಿ ಮಾಡಿದ್ಲು ಐನಾತಿ ಪ್ಲಾನ್…!
ಕೋವಿಡ್ ಸಾಂಕ್ರಮಿಕವನ್ನು ಗಮನದಲ್ಲಿಟ್ಟುಕೊಂಡು, ಆಧಾರ್‌ನೊಂದಿಗೆ ಪಾನ್ ಲಿಂಕ್ ಮಾಡುವ ಗಡುವನ್ನು ಎಸ್‌ಬಿಐ ಸೆಪ್ಟೆಂಬರ್ 30, 2021ರಿಂದ ಮಾರ್ಚ್ 31, 2022ರವರೆಗೆ ವಿಸ್ತರಿಸಿದೆ.
ಪಾನ್-ಆಧಾರ್ ಲಿಂಕಿಂಗ್ ಮಾಡುವ ಸರಳ ಪ್ರಕ್ರಿಯೆ ಇಂತಿದೆ:
ಹಂತ 1: ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ — https://www.incometaxindiaefiling.gov.in/home.
ಹಂತ 2: ‘Link Aadhaar’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ಹೊಸ ಪುಟದಲ್ಲಿ, ನಿಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಿ.
ಹಂತ 4: ದಾಖಲೆಯಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಮಾತ್ರ ನಮೂದಿಸಿದ್ದರೆ ‘I have only year of birth in aadhaar card’ ಎಂಬ ಬಾಕ್ಸ್ ಅನ್ನು ಆಯ್ಕೆಮಾಡಿ.
ಹಂತ 5: ಕ್ಯಾಪ್ಚಾ ಕೋಡ್ ಮೂಲಕ ವಿವರಗಳನ್ನು ಪರಿಶೀಲಿಸಿ ಅಥವಾ OTP ಆಯ್ಕೆಮಾಡಿ.
ಹಂತ 6: Link Aadhaar ಬಟನ್ ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲಾಗುತ್ತದೆ.
ಎಸ್‌ಎಂಎಸ್ ಮೂಲಕ ಪಾನ್-ಆಧಾರ್ ಲಿಂಕಿಂಗ್ ಮಾಡುವುದು ಹೀಗೆ
ಹಂತ 1: ಮೆಸೇಜ್ ಬಾಕ್ಸ್‌ನಲ್ಲಿ – UIDPAN<12-ಅಂಕಿಯ ಆಧಾರ್>10-ಅಂಕಿಯ PAN> ಎಂದು ಟೈಪ್ ಮಾಡಿ.
ಹಂತ 2: ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ ಮತ್ತು ನಿಮ್ಮ ಪಾನ್ ಅನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ.