
ನಮ್ಮ ಪ್ರತಿ ಕೆಲಸಕ್ಕೂ ಈಗ WhatsApp ಬೇಕು. ಅನೇಕ ಬ್ಯಾಂಕ್‌ಗಳು ಕೂಡ ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ದೇಶದ ಅತಿದೊಡ್ಡ ಬ್ಯಾಂಕ್ SBI ಕೂಡ WhatsApp ಬ್ಯಾಂಕಿಂಗ್ ಸೌಲಭ್ಯವನ್ನು ನೀಡಲು ಪ್ರಾರಂಭಿಸಿದೆ.
ನೀವು ಈಗ ಎಸ್‌ಬಿಐನ ವಾಟ್ಸಾಪ್ ಸಂಖ್ಯೆಯ ಚಾಟ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್‌ಮೆಂಟ್‌ಗಳು ಸೇರಿದಂತೆ ಹಲವು ಸೇವೆಗಳ ಲಾಭವನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಇನ್ನು ಮುಂದೆ ಎಟಿಎಂಗೆ ಹೋಗಬೇಕಾಗಿಲ್ಲ. SBI ಹೊಸ ಫೀಚರ್ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಟ್ವೀಟ್‌ನಲ್ಲಿ ಈ ಸೇವೆಯನ್ನು ಹೇಗೆ ಬಳಸುವುದು ಎಂಬ ಮಾಹಿತಿಯನ್ನು ಹಂಚಿಕೊಂಡಿದೆ. ಎಸ್‌ಬಿಐ ಗ್ರಾಹಕರು +919022690226 ಗೆ ಹಾಯ್ ಎಂಬ ಸಂದೇಶವನ್ನು ಕಳುಹಿಸಬೇಕು. ಸೇವೆಗಳನ್ನು ಪಡೆಯಲು ಸೂಚನೆಗಳನ್ನು ಅನುಸರಿಸಬೇಕು.
SBI ನ WhatsApp ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಹಂತ-ಹಂತದ ಮಾರ್ಗದರ್ಶಿ:
SBI WhatsApp ಬ್ಯಾಂಕಿಂಗ್ ಪ್ರಯೋಜನಗಳನ್ನು ಪಡೆಯಲು, ನೀವು ಮೊದಲು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ, ನೀವು WAREG ಎಂದು ಟೈಪ್ ಮಾಡಬೇಕು, ನಂತರ ಸ್ಪೇಸ್ ಕೊಟ್ಟು ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ. 7208933148ಗೆ SMS ಕಳುಹಿಸಿ. ಅದರ ಸ್ವರೂಪ ಹೀಗಿರಬೇಕು – WAREG <ಸ್ಪೇಸ್>ಖಾತೆ ಸಂಖ್ಯೆ ಮತ್ತು ಅದನ್ನು 7208933148 ಗೆ ಕಳುಹಿಸಿ.
ನಿಮ್ಮ SBI ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದಲೇ ಸಂದೇಶ ಕಳುಹಿಸಿ.
ನೋಂದಣಿ ನಂತರ, +919022690226 ಗೆ ‘ಹಾಯ್’ ಎಂದು ಕಳುಹಿಸಿ. ಈ ಸಂದೇಶಕ್ಕೆ ನೀವು ಪ್ರತ್ಯುತ್ತರವನ್ನು ಪಡೆಯುತ್ತೀರಿ.
ನೀವು ಖಾತೆಯ ಬ್ಯಾಲೆನ್ಸ್ ಕುರಿತು ವಿಚಾರಿಸಬೇಕಿದ್ದಲ್ಲಿ 1ನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಕೊನೆಯ ಐದು ವಹಿವಾಟುಗಳ ವಿವರಗಳನ್ನು ನೀವು ಪಡೆಯಬೇಕಾದರೆ, 2ನ್ನು ಆಯ್ಕೆ ಮಾಡಿಕೊಳ್ಳಿ.
ನೀವು WhatsApp ಬ್ಯಾಂಕಿಂಗ್ ಸೇವೆಗಳಿಂದ ಡಿ-ರಿಜಿಸ್ಟರ್ ಮಾಡಬೇಕಾದರೆ 3 ಅನ್ನು ಆರಿಸಿ. SBIನ WhatsApp ಬ್ಯಾಂಕಿಂಗ್‌ನೊಂದಿಗೆ, ನೀವು 24×7 ಸೌಲಭ್ಯಗಳನ್ನು ಆನಂದಿಸಬಹುದು. ನಿಮ್ಮ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸುವುದು ಸೇರಿದಂತೆ ಹಲವು ಇತರ ಸೌಲಭ್ಯಗಳ ಲಾಭವನ್ನು ನೀವು ಪಡೆಯಬಹುದು.