ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದೆ. ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದ್ದು, ಇದರಿಂದಾಗಿ ಇಎಂಐ ಮೊತ್ತವು ಸಹ ಏರಿಕೆಯಾಗಿದೆ.
ಎಲ್ಲ ಅವಧಿಯ ಸಾಲಗಳಿಗೆ ಇದು ಅನ್ವಯವಾಗಲಿದ್ದು, ಇಂದಿನಿಂದಲೇ ಜಾರಿಗೆ ಬಂದಿದೆ. ಒಂದು ದಿನದ ಎಂ ಸಿ ಎಲ್ ಆರ್ ದರವನ್ನು ಶೇ.7.85 ರಿಂದ ಶೇ.7.95 ಕ್ಕೆ ನಿಗದಿಪಡಿಸಲಾಗಿದ್ದರೆ, ಒಂದು ತಿಂಗಳ ಎಂ ಸಿ ಎಲ್ ಆರ್ ದರವನ್ನು ಶೇ.8 ರಿಂದ ಶೇಕಡಾ 8.10ಕ್ಕೆ ನಿಗದಿಪಡಿಸಲಾಗಿದೆ.
ಇನ್ನು ಮೂರು ತಿಂಗಳ ಎಂಸಿಎಲ್ಆರ್ ದರವನ್ನೂ ಸಹ ಶೇಕಡಾ 8 ರಿಂದ ಶೇ.8.10ಕ್ಕೆ ನಿಗದಿಪಡಿಸಲಾಗಿದ್ದು, ಆರು ತಿಂಗಳ ಎಂಸಿಎಲ್ಆರ್ ದರವನ್ನು ಶೇಕಡಾ 8.30 ಯಿಂದ ಶೇ.8.40 ಏರಿಕೆ ಮಾಡಲಾಗಿದೆ. ಹಾಗೆಯೇ ಒಂದು ವರ್ಷದ ಅವಧಿಯ ಎಂಸಿಎಲ್ಆರ್ ದರವನ್ನು ಶೇಕಡಾ 8.40 ಇಂದ ಶೇಕಡಾ 8.50ಗೆ ಹೆಚ್ಚಿಸಲಾಗಿದೆ. ಎರಡು ವರ್ಷಗಳ ಅವಧಿಯ ಎಂ ಸಿ ಎಲ್ ಆರ್ ದರ ಶೇ.8.50 ಯಿಂದ ಶೇ.8.60 ಹಾಗೂ ಮೂರು ವರ್ಷದ ಎಂ ಸಿ ಎಲ್ ಆರ್ ದರ ಶೇ.8.60 ಯಿಂದ ಶೇ.8.70 ಗೆ ನಿಗದಿಪಡಿಸಲಾಗಿದೆ.
ಈ ಹೆಚ್ಚಳದಿಂದಾಗಿ ಗೃಹ ಸಾಲ, ವಾಹನ ಸಾಲ ಪಡೆದವರ ಇಎಂಐ ನಲ್ಲೂ ಸಹ ಏರಿಕೆಯಾಗಲಿದೆ.